ತುಂಬೆಯಲ್ಲಿ ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಉದ್ಘಾಟನೆ
ಮಂಗಳೂರು: ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ (ಎಫ್‌ಎಂಸಿಐ ) 10ನೇ ಶೈಕ್ಷಣಿಕ ಘಟಕವಾಗಿರುವ ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ತುಂಬೆ( ಎಫ್‌ಎಂಎಎಚ್ ಎಸ್‌ಸಿಟಿ) ಸೋಮವಾರ ಉದ್ಘಾಟನೆಗೊಂಡಿತು.
ಎಫ್‌ಎಂಎನ್‌ಸಿಟಿಯ ಫ್ಲಾರೆನ್ಸ್ ನೈಟಿಂಗೇಲ್ ಸಭಾಂಗಣದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫಾ. ರಿಚರ್ಡ್ ಅಲೋಶಿಯಸ್ ಕೊಯೆಲ್ಲೊ ಅವರು ಕಂಕನಾಡಿ ಮುಖ್ಯ ಕ್ಯಾಂಪಸ್‌ನಲ್ಲಿರುವಂತಹ ಅವಕಾಶಗಳು ಮತ್ತು ಶ್ರೇಷ್ಠತೆಯನ್ನು ತುಂಬೆ ಕ್ಯಾಂಪಸ್ ನೀಡುತ್ತದೆ ಎಂದು ಅವರು ಹೇಳಿದರು.
ಡಾ.ಶಿವಶಂಕರ.ಎ.ಆರ್. ಅವರು ತುಂಬೆ ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ಪ್ರಾಂಶುಪಾಲರನ್ನಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಿಸಿದರು. ಮುಖ್ಯ ಅತಿಥಿಯಾಗಿ ಕಂಕನಾಡಿಯ ಎಫ್‌ಎಂಸಿಒಎಎಚ್‌ಎಸ್ ಪ್ರಾಂಶುಪಾಲ ಡಾ.ಹಿಲ್ಡಾ ಫೆರ್ನಾಂಡಿಸ್ ಭಾಗವಹಿಸಿದ್ದರು.
ಆಡಳಿತಾಧಿಕಾರಿ ಫಾ. ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ವೈದ್ಯಕೀಯ ಅಧೀಕ್ಷಕ ಡಾ. ಕಿರಣ್ ಶೆಟ್ಟಿ, ಎಫ್‌ಎಂಎಎಚ್‌ಎಸ್‌ಸಿಟಿ ಪ್ರಾಂಶುಪಾಲ ಡಾ.ಶಿವಶಂಕರ ಎ.ಆರ್ ಉಪಸ್ಥಿತರಿದ್ದರು.
ಅರಿವಳಿಕೆ ಮತ್ತು ಆಪರೇಷನ್ ಥಿಯೇಟರ್ ತಂತ್ರಜ್ಞಾನ (ಬಿಎಸ್ಸಿ ಎಟಿ/ಒಟಿ) ಮತ್ತು ಬಿಎಸ್ಸಿ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ (ಬಿಎಸ್ಸಿ -ಎಂಐಟಿ) ಕೋರ್ಸ್‌ಗಳ ಅಧ್ಯಯನಕ್ಕೆ ನೂತನ ಕಾಲೇಜಿನಲ್ಲಿ ಅವಕಾಶವಿದ್ದು, ಪ್ರತಿಯೊಂದು ವಿಭಾಗ ದಲ್ಲೂ 10 ಸೀಟುಗಳು ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.