ವಿವಿಧೆಡೆ ಅಬಕಾರಿ ಅಧಿಕಾರಿಗಳ ದಾಳಿ: ಅಕ್ರಮ ಮದ್ಯ ವಶ

Update: 2024-11-18 13:40 GMT

ಸಾಂದರ್ಭಿಕ ಚಿತ್ರ

ಮಂಗಳೂರು, ನ.18: ನಗರದ ಗೋರಿಗುಡ್ಡೆಯ ಚಂದ್ರಕಾಂತ್ ಎಂಬಾತನ ಮನೆಗೆ ದಾಳಿ ನಡೆಸಿದ ಅಬಕಾರಿ ಇಲಾ ಖೆಯ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿದ್ದ ಗೋವಾ ರಾಜ್ಯದ ವಿವಿಧ ಬ್ರಾಂಡಿನ ಮದ್ಯವನ್ನು ಮಾಡಿ ವಶಪಡಿಸಿಕೊಂಡಿದ್ದಾರೆ.

ಅಂದಾಜು 64,500 ರೂ. ಮೌಲ್ಯದ ಸುಮಾರು 47 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಸೂಟರ್‌ಪೇಟೆಯ ಶ್ಯಾಮ ಸುಂದರ ನಂಬಿಯಾರ್ ಎಂಬಾತ ತನ್ನ ದ್ವಿಚಕ್ರ ವಾಹನದಲ್ಲಿ  ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಾಟದ ಉದ್ದೇಶದಿಂದ ಸೈನಿಕರಿಗೆ ಮಾತ್ರ ಮಾರಾಟ ಎಂದು ಲೇಬಲ್ ಇರುವ ವಿವಿಧ ಬ್ರಾಂಡ್‌ಗಳ ಮಧ್ಯವನ್ನು ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅಬಕಾರಿ ಇಲಾಖೆಯ ಅಧಿಕಾರಿಗಳು 1 ಲಕ್ಷ ರೂ. ಮೌಲ್ಯದ 11.250 ಲೀ.ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಇಲಾಖೆ ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕಿ ಕಮಲಾ ಎಚ್‌ಎನ್, ಸಿಬ್ಬಂದಿಗಳಾದ ಸುನಿಲ್ ಬೈಂದೂರು, ಬಸವರಾಜ್ ತೋರೆ, ನವೀನ್ ನಾಯಕ್ ಬಿ, ರಘುರಾಮ್, ಪವನ್ ಕುಮಾರ್ ಪಾಲ್ಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News