ಯೂನಿಯನ್ ಬ್ಯಾಂಕ್‌ನಲ್ಲಿ ಸ್ಥಾಪಕರ ದಿನಾಚರಣೆ

Update: 2024-11-18 13:28 GMT

ಮಂಗಳೂರು, ನ.18: ಯೂನಿಯಾನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ವಲಯ ಕಚೇರಿ ಮತ್ತು ಮಂಗಳೂರು ಪ್ರಾದೇಶಿಕ ಕಚೇರಿಯ ಸಂಯುಕ್ತ ಆಶ್ರಯದಲ್ಲಿ 106ನೇ ಸ್ಥಾಪಕ ದಿನಾಚರಣೆ ನಗರದ ಟಿಎಂಪೈ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.

ಬ್ಯಾಂಕಿನ ಗ್ರಾಹಕರು, ಬ್ಯಾಂಕ್‌ನ ನಿವೃತ್ತ ಜನರಲ್ ಮ್ಯಾನೇಜರ್‌ಗಳು ಮತ್ತು ಸಿಬ್ಬಂದಿ ಸದಸ್ಯರು ಮತ್ತು ಅವರ ಕುಟುಂಬದವರು ಸೇರಿದಂತೆ ಕಾರ್ಯಕ್ರಮದಲ್ಲಿ 1500 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಿಇಒ ಮತ್ತು ಆಡಳಿತ ನಿರ್ದೇಶಕಿ ಮಣಿ ಸಂದೇಶ ನೀಡಿ ಬ್ಯಾಂಕ್‌ನ ಬೆಳವಣಿ ಗೆಯಲ್ಲಿ ಜೊತೆಗಿದ್ದು ಬ್ಯಾಂಕ್ ನಿರ್ವಹಣೆಯಲ್ಲಿ ನಂಬಿಕೆಯನ್ನು ತೋರಿಸಿದ್ದಕ್ಕಾಗಿ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು. ಅವರು 105 ವರ್ಷಗಳ ಅಸ್ತಿತ್ವದ ಮೈಲಿಗಲ್ಲನ್ನು ಸಾಧಿಸಿದ್ದಕ್ಕಾಗಿ ಬ್ಯಾಂಕ್‌ನ ಉದ್ಯೋಗಿಗಳನ್ನು ಅಭಿನಂದಿಸಿದರು.

ಈ ವರ್ಷದ ಸಂಸ್ಥಾಪನಾ ದಿನದ ಥೀಮ್ ಗೋ ಗ್ರೀನ್ ಕೇವಲ ಘೋಷಣೆಯಾಗಿರದೆ ಮುಂದಿನ ಪೀಳಿಗೆಗೆ ಪರಿಸರವನ್ನು ಸಂರಕ್ಷಿಸುವಲ್ಲಿ ಬ್ಯಾಂಕ್ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ವಿಶ್ವವನ್ನು ಪ್ರಕೃತಿ ಸ್ನೇಹಿಯನ್ನಾಗಿ ಮಾಡಲು ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು.

ಕಾರ್ಬನ್ ಅಕೌಂಟಿಂಗ್ ಫೈನಾನ್ಸಿಂಗ್‌ನೊಂದಿಗೆ ಪಾಲುದಾರಿಕೆ ಹೊಂದಿರುವ ಭಾರತದ ಮೊದಲ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಗಿದೆ ಮತ್ತು ಶುದ್ಧ ಮತ್ತು ನವೀಕರಿಸಬಹುದಾದ ಇಂಧನ ಹಣಕಾಸು ಕ್ಷೇತ್ರದಲ್ಲಿ ರೂ.26800 ಕೋಟಿ ಹೂಡಿಕೆ ಮಾಡಲು ಯೋಜಿಸುತ್ತಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ, ಬ್ಯಾಂಕ್ ಗ್ರಾಹಕರ ಸಂತೋಷವನ್ನು ಹೆಚ್ಚಿಸುವ ಮತ್ತು ಖಾತೆ ತೆರೆಯುವ ಮತ್ತು ಸಾಲಗಳ ಮಂಜೂ ರಾತಿ ಪ್ರಕ್ರಿಯೆಯನ್ನು ಸುಲಭಗೊಳಿಸುವ 5 ಹೊಸ ಡಿಜಿಟಲ್ ಉತ್ಪನ್ನಗಳ ಅನಾವರಣವಾಗಿರುವುದನ್ನು ಮಂಗಳೂರಿನ ಪ್ರೇಕ್ಷಕರಿಗೆ ನೇರ ಪ್ರಸಾರ ಮೂಲಕ ತಿಳಿಸಲಾಯಿತು.

ಮಂಗಳೂರಿನ ಚೇತನ ಶಾಲೆಯ ಮಕ್ಕಳಿಂದ ಮತ್ತು ಹೆಜ್ಜೆನಾದ ಕಲಾವಿದರ ತಂಡದಿಂದ ಕಾರ್ಯಕ್ರಮ ನೀಡಿದರು. ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಎ ಕೆ ವಿನೋದ್, ಜನರಲ್ ಮ್ಯಾನೇಜರ್ ಅಲೋಕ್ ಕುಮಾರ್ ಉಪಸ್ಥಿತರಿದ್ದರು.

ಮಂಗಳೂರು ವಲಯ ಮುಖ್ಯಸ್ಥೆ ರೇಣು ಕೆ ನಾಯರ್ ಸ್ವಾಗತಿಸಿದರು. ಮಂಗಳೂರು ಪ್ರಾದೇಶಿಕ ಮುಖ್ಯಸ್ಥರಾದ ಎ.ರಾಜಮಣಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News