ಅ.20: ಕುಟುಂಬ ವೈದ್ಯರ ರಾಜ್ಯ ಸಮ್ಮೇಳನ

Update: 2024-10-16 11:08 GMT

ಮಂಗಳೂರು: ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ ಹಾಗೂ ಮಂಗಳೂರು ಶಾಖೆ, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಕುಟುಂಬ ವೈದ್ಯರ ವಿಭಾಗದ ಮಾರ್ಗದರ್ಶನದಲ್ಲಿ ಕುಟುಂಬ ವೈದ್ಯರ ಸಂಘ ಮಂಗಳೂರು ಇದರ ವಿಂಶತಿ ವರ್ಷದ ಆಚರಣೆ ಅಂಗವಾಗಿ ಕುಟುಂಬ ವೈದ್ಯರ ರಾಜ್ಯ ಸಮ್ಮೇಳನ ಅ.20ರಂದು ಐಎಂಎ ಸಭಾಂಗಣದಲ್ಲಿ ನಡೆಯಲಿದೆ.

ಕುಟುಂಬ ವೈದ್ಯರು ಅಂದು-ಇಂದು-ಮುಂದು ಎಂಬ ವಿಷಯದಲ್ಲಿ ವಿವಿಧ ಕ್ಷೇತ್ರಗಳ ತಜ್ಞರು ವಿಷಯ ಮಂಡನೆ ಮಾಡಲಿ ದ್ದಾರೆ ಎಂದು ಕುಟುಂಬ ವೈದ್ಯರ ಸಂಘದ ರಾಜ್ಯ ಸಂಘದ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ಬುಧವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿಟ್ಟೆ ವಿವಿ ಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ ಸಮ್ಮೇಳನ ಉದ್ಘಾಟಿಸುವರು. ರಾಜ್ಯ ಮೆಡಿಕಲ್ ಕೌನ್ಸಿಲ್‌ನ ಅಧ್ಯಕ್ಷ ಡಾ.ಯೋಗಾನಂದ ರೆಡ್ಡಿ ಅತಿಥಿಯಾಗಿರುವರು. ಕುಟುಂಬ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳು, ಪರಿಹಾರ ಕ್ರಮಗಳು ಮೊದಲಾದ ವಿಷಯಗಳಿಗೆ ಸಂಬಂಧಿಸಿ ರಾಷ್ಟ್ರ, ರಾಜ್ಯ ಹಾಗೂ ಮಂಗಳೂರಿನ ವೈದ್ಯರು ವಿಚಾರ ಮಂಡಿಸುವರು. ಸುಮಾರು 200ಕ್ಕಿಂತಲೂ ಅಧಿಕ ವೈದ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದವರು ವಿವರಿಸಿದರು.

ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆಯ ಅಧ್ಯಕ್ಷ ಡಾ.ರಂಜನ್ ಆರ್.ಕೆ., ಡಾ.ಗೋಪಾಲಕೃಷ್ಣ ಸಂಕಬಿ ತ್ತಿಲು, ಡಾ.ಮನೀಶ್, ಡಾ.ಶೇಖರ ಪೂಜಾರಿ, ಡಾ.ನಾರಾಯಣ ಭಟ್, ಡಾ.ಸದಾಶಿವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News