ಅ. 18-19 ರಂದು 8ನೇ ಐಇಇಇ ಡಿಸ್ಕವರ್ ಅಂತಾರಾಷ್ಟ್ರೀಯ ಸಮ್ಮೇಳನ

Update: 2024-10-16 09:04 GMT

ಮಂಗಳೂರು, ಅ.16: ಐಇಇಇ ಡಿಸ್ಕವರ್ (ಡಿಸ್ಟ್ರಿ ಬ್ಯೂಟೆಡ್‌ಕಂಪ್ಯೂಟಿಂಗ್, ವಿಎಲ್‌ಎಸ್‌ಐ, ಎಲೆಕ್ಟ್ರಿಕಲ್ ಸರ್ಕ್ಯೂಟ್‌ಗಳು ಮತ್ತು ರೊಬೊಟಿಕ್ಸ್) 8ನೇ ಅಂತಾರಾಷ್ಟ್ರೀಯ ಸಮ್ಮೇಳನ ಅ.18 ಮತ್ತು19 ರಂದು ನಗರದ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ ಎಂದು ಎಸ್.ಜೆ.ಇ.ಸಿಯ ಪ್ರಿನ್ಸಿಪಾಲ್ ಡಾ. ರಿಯೋ ಡಿಸೋಜ ಹೇಳಿದರು.

ಅವರು ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನದಲ್ಲಿ ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್, ವಿಎಲ್‌ಎಸ್‌ಐ, ಹೆಲ್ತ್ ಕೇರ್, ರೊಬೊಟಿಕ್ಸ್, ಎಲೆಕ್ಟ್ರಿಕಲ್ ಸರ್ಕ್ಯೂಟ್‌ಗಳು ಮತ್ತು ಇತ್ತೀಚಿನ ಪ್ರಗತಿಯನ್ನು ಅನ್ವೇಷಿಸಲು ಜಾಗತಿಕ ಸಂಶೋಧಕರು, ನಾವೀನ್ಯಕಾರರು ಮತ್ತು ಉದ್ಯಮದ ನಾಯಕರನ್ನು ಒಟ್ಟುಗೂಡಿಸುವ ಪ್ರಯತ್ನವಾಗಲಿದೆ ಎಂದರು.

ಅ.18ರಂದು ಬೆಳಗ್ಗೆ 10ಕ್ಕೆ ಕಾರ‌್ಯಕ್ರಮದ ಉದ್ಘಾಟನೆ ನಡೆಯಲಿದೆ. ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್‌ನ ತಾಂತ್ರಿಕ ಪ್ರತಿಭೆ ಅಭಿವೃದ್ಧಿ ನಿರ್ದೇಶಕ ಡಾ.ಸಿ.ಪಿ. ರವಿ ಕುಮಾರ್ ಅವರು ತಂತ್ರಜ್ಞಾನದ ಅನ್ವೇಷಣೆ - ಹಿಂದಿನ, ಪ್ರಸ್ತುತ ಮತ್ತು ಭವಿಷ್ಯದ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ಅ.19ರಂದು ಸಮಾರೋಪ ನಡೆಯಲಿದ್ದು, ಸಮ್ಮೇಳನದಲ್ಲಿ ಒಟ್ಟು 6 ವಿಷಯಗಳ ಅಡಿಯಲ್ಲಿ 79 ಸಂಶೋಧನಾ ಪ್ರಬಂಧಗಳನ್ನು ಲೇಖಕರು ಪ್ರಸ್ತುತಪಡಿಸಲಿದ್ದಾರೆ. ಇದರ ಜತೆಯಲ್ಲಿ ನಾನಾ ವಿಚಾರಗಳ ಮೇಲೆ ಸಂವಾದಗಳು, ತಾಂತ್ರಿಕ ಚರ್ಚೆಗಳು ಸಾಗಲಿದೆ. ಇದರ ಜತೆಗೆ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯ ಡಾ.ಎಸ್. ಕೆ.ರಮೇಶ್, ತೇಜಸ್ ನೆಟ್‌ವರ್ಕ್ಸ್‌ನ ಅನಿಂದ್ಯಾ ಸಹಾ, ಎನ್‌ಐಟಿಕೆ ಕ್ಯಾಲಿಕೆಟ್‌ನ ಡಾ.ಎಸ್.ಡಿ. ಮಧು ಕುಮಾರ್ ತಮ್ಮ ವಿಚಾರಗಳನ್ನು ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ಎಸ್.ಜಿ.ಇ.ಸಿಯ ಡಾ.ಶ್ರೀ ದೇವಿ ಸರಳಾಯ ಮತ್ತು ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ.ಹರಿವಿನೋದ್ ಎನ್, ಪಿಆರ್‌ಒ ರಾಜೇಶ್ ಬೆಳ್ಚಡ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News