ಆಟೋ ರಿಕ್ಷಾದಲ್ಲಿ ಅಕ್ರಮ ಗೋವು ಸಾಗಾಟ ಆರೋಪ: ಪೊಲೀಸರ ವಶಕ್ಕೆ

Update: 2024-10-16 11:20 GMT

ಪುತ್ತೂರು: ಆಟೋ ರಿಕ್ಷಾವೊಂದರಲ್ಲಿ ಗೋವೊಂದನ್ನು ಅಕ್ರಮ ಸಾಗಾಟ ಮಾಡುತ್ತಿದ್ದಾರೆ ಎನ್ನಲಾದ ಘಟನೆ ಪುತ್ತೂರು ನಗರದ ಬೈಪಾಸ್ ರಸ್ತೆಯಲ್ಲಿ ಬುಧವಾರ ಅಪರಾಹ್ನ ನಡೆದಿದೆ.

ಪುತ್ತೂರು ಬೈಪಾಸ್ ರಸ್ತೆಯ ಮೂಲಕ ಆಟೋ ರಿಕ್ಷಾದಲ್ಲಿ ವ್ಯಕ್ತಿಯೋರ್ವ ಗೋವು ಸಾಗಿಸುತ್ತಿರುವುದರ ಕುರಿತು ಮಾಹಿತಿ  ಪಡೆದ ಪೊಲೀಸರು ಜಾನುವಾರು ಸಹಿತ ಆಟೋ ರಿಕ್ಷಾವನ್ನು ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ.

ಈ ಸಂದರ್ಭ ಅಟೋದಲ್ಲಿ ಇಬ್ಬರು ಮಹಿಳೆಯರು ಪ್ರಯಾಣಿಸುತ್ತಿದ್ದು , ಪೊಲೀಸರು ಅಟೋ, ಚಾಲಕನ ಸಹಿತ ಎಲ್ಲರನ್ನೂ ಠಾಣೆಗೆ ಕರೆದೊಯ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News