2025ರ ಜನವರಿಯಲ್ಲಿ ಫಿಝಾ ಬೈ ನೆಕ್ಸಸ್‌ ಮಾಲ್‌ನಲ್ಲಿ ಐಡಿಯಲ್ ಕೆಫೆ ರೆಸ್ಟೋರೆಂಟ್ ಆರಂಭ

Update: 2024-10-12 12:46 GMT

ಮಂಗಳೂರು,ಅ.12:ನಗರದ ಪಾಂಡೇಶ್ವರದಲ್ಲಿರುವ ಫಿಝಾ ಬೈ ನೆಕ್ಸಸ್ ಮಾಲ್‌ನಲ್ಲಿ ಐಸ್‌ಕ್ರೀಮ್ ಬ್ರಾಂಡ್‌ನ ಐಡಿಯಲ್ ಕಫೆ ರೆಸ್ಟೋರೆಂಟ್ 2025ರ ಜನವರಿಯಲ್ಲಿ ಪ್ರಾರಂಭಗೊಳ್ಳಲಿದೆ.

ಅದರ ಪೂರ್ವಭಾವಿಯಾಗಿ ವಿಶಾಲವಾದ ಈ ರೆಸ್ಟೋರೆಂಟ್‌ನ ಬೀಗದ ಕೀಲಿಯನ್ನು ಫಿಝಾ ಬೈ ನೆಕ್ಸಸ್ ಮಾಲ್‌ನ ಡೈರೆಕ್ಟರ್ ಅರವಿಂದ ಶ್ರೀವಾಸ್ತವ್ ಅವರು ಐಡಿಯಲ್ ಸಂಸ್ಥೆಯ ಆಡಳಿತ ನಿರ್ದೇಶಕ ಮುಕುಂದ ಕಾಮತ್‌ರಿಗೆ ಹಸ್ತಾಂತರಿ ಸಿದರು. ಈ ಸಂದರ್ಭ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News