ಬ್ಯಾರಿಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರೋ ಗೇಮ್ಸ್ ಕಾರ್ನಿವಲ್-24

Update: 2024-10-12 12:39 GMT

ಮಂಗಳೂರು: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT)ಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗವು ಅ.10ರಂದು ಎಲೆಕ್ಟ್ರೋ ಗೇಮ್ಸ್ ಕಾರ್ನಿವಲ್-24 ಅನ್ನು ಯಶಸ್ವಿಯಾಗಿ ಆಯೋಜಿಸಿತು.

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಉಪ ಪ್ರಾಂಶುಪಾಲ ಡಾ.ಅಝೀಝ್ ಮುಸ್ತಫಾ, ವಿಭಾಗದ ಮುಖ್ಯಸ್ಥ ಡಾ.ಅಬ್ದುಲ್ಲಾ ಗುಬ್ಬಿ ನೇತೃತ್ವದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಅಮನ್ ಷರೀಫ್ ಸ್ವಾಗತ ಭಾಷಣ ಮಾಡಿದರು. ನಂತರ ಡಾ.ಮುಸ್ತಫಾ ಮತ್ತು ಡಾ.ಗುಬ್ಬಿ ಸಭೆಯನ್ನುದ್ದೇಶಿಸಿ ಕ್ರೀಡಾಮನೋಭಾವದ ಮಹತ್ವವನ್ನು ಸಾರಿದರು.

ಎಲೆಕ್ಟ್ರೋ ಗೇಮ್ಸ್ ಕಾರ್ನಿವಲ್-24 ಕಾರ್ಯಕ್ರಮದಲ್ಲಿ ಚೆಸ್, ಕೇರಂ, ಲುಡೋ, ಬ್ಯಾಡ್ಮಿಂಟನ್, ಥ್ರೋಬಾಲ್, ಫುಟ್‌ ಬಾಲ್ ಮತ್ತು ಕ್ರಿಕೆಟ್ ಸೇರಿದಂತೆ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು ಒಳಗೊಂಡಿದ್ದವು. ಎಲೆಕ್ಟ್ರೋ ಮೇವರಿಕ್ಸ್, ಪಿಎಸ್‌ಕೆ ಪಯೋನಿಯರ್ಸ್, ಸಿಲಿಕಾನ್ ಸ್ಪಾರ್ಟನ್ಸ್ ಮತ್ತು ಅಪೆಕ್ಸ್ ಡೈನಮೋಸ್ ನಾಲ್ಕು ತಂಡಗಳು ಸ್ಪರ್ಧೆಗಳಲ್ಲಿ ಭಾಗ ವಹಿಸಿದ್ದವು. ಕಾರ್ಯಕ್ರಮವನ್ನು ಫಾತಿಮಾ ತಸ್ಕೀನ್ ನಿರ್ವಹಿಸಿ, ಪ್ರೊ. ಅಬ್ದುಲ್ ಜಬ್ಬಾರ್ ಸಂಯೋಜಿಸಿದರು.

ಒಳಾಂಗಣ ಆಟಗಳಲ್ಲಿ ಚೆಸ್, ಕೇರಂ ಮತ್ತು ಲುಡೋ ಸೇರಿದ್ದವು. ಬ್ಯಾಡ್ಮಿಂಟನ್ ಹುಡುಗರು ಮತ್ತು ಹುಡುಗಿಯರಿಗೆ ಮುಕ್ತವಾಗಿತ್ತು. ಥ್ರೋಬಾಲ್ ಕೇವಲ ಹುಡುಗಿಯರಿಗೆ ಮತ್ತು ಫುಟ್ಬಾಲ್, ಕ್ರಿಕೆಟ್ ಹುಡುಗರಿಗೆ ಮೀಸಲಾಗಿತ್ತು. ಎಲೆಕ್ಟ್ರೋ ಮೇವರಿಕ್ಸ್ ಕಾರ್ಯಕ್ರಮದಲ್ಲಿ ಚಾಂಪಿಯನ್‌ ಪ್ರಶಸ್ತಿ ಪಡೆಯಿತು.

ವಿಭಾಗದ ಪರವಾಗಿ ಪ್ರಾಧ್ಯಾಪಕ ಅಬ್ದುಲ್ ಜಬ್ಬಾರ್ ಅವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳ ಪರವಾಗಿ ಕ್ರೀಡಾ ಸಂಯೋಜಕರಾದ 4ನೇ ವರ್ಷದ ಇಸಿಇಯ ಮೊಹಮ್ಮದ್ ಹಫೀಝ್, ಮುಹಮ್ಮದ್ ತಹಸೀನ್, ಹಾಗೂ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಮತ್ತು ಕಾರ್ಯಕ್ರಮ ಸಂಯೋಜಕರಿಗೆ ವಿಶೇಷ ಮೆಚ್ಚುಗೆ ನೀಡಲಾಯಿತು. ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.‌


























Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News