ಡಿ.30: ಕಾಂಗ್ರೆಸ್ ಎಸ್ಸಿ ಘಟಕದಿಂದ ಪ್ರತಿಭಟನೆ
Update: 2024-12-26 16:27 GMT
ಮಂಗಳೂರು: ಸಂಸತ್ತಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ವತಿಯಿಂದ ಡಿ.30ರಂದು ನಗರದಲ್ಲಿ ’ಸಂವಿಧಾನ ಸಂರಕ್ಷಣಾ ಜಾಥಾೞ ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 4.30ಕ್ಕೆ ನಗರದ ಜ್ಯೋತಿ ಅಂಬೇಡ್ಕರ್ ವೃತ್ತದಿಂದ ಮಿನಿವಿಧಾನ ಸೌಧದವರೆಗೆ ಜಾಥಾ ನಡೆಸಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಪರಿಶಿಷ್ಟ ಜಾತಿ ಘಟಕದ ದ.ಕ.ಜಿಲ್ಲಾಧ್ಯಕ್ಷ ದಿನೇಶ್ ಮೂಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.