ಮಂಗಳೂರು: ಡಿ.28, 29ರಂದು ನಿಗದಿಯಾಗಿದ್ದ 'ಬೀಚ್ ಉತ್ಸವ' ಮುಂದೂಡಿಕೆ
Update: 2024-12-27 05:07 GMT
ಮಂಗಳೂರು: 'ಕರಾವಳಿ ಉತ್ಸವ'ದ ಪ್ರಯುಕ್ತ ದ.ಕ. ಜಿಲ್ಲಾಡಳಿತದ ವತಿಯಿಂದ ಡಿಸೆಂಬರ್ 28 ಮತ್ತು 29ರಂದು ತಣ್ಣೀರುಬಾವಿ ಬೀಚ್ ನಲ್ಲಿ ನಿಗದಿಯಾಗಿದ್ದ 'ಬೀಚ್ ಉತ್ಸವ'ವನ್ನು ಮುಂದೂಡಲಾಗಿದೆ.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನದ ಪ್ರಯುಕ್ತ ರಾಜ್ಯಾದ್ಯಂತ ಶೋಕಾಚರಣೆ ಇರುವುದರಿಂದ ಬೀಚ್ ಉತ್ಸವ ಮುಂದೂಡಲ್ಪಟ್ಟಿದೆ. ಬೀಚ್ ಉತ್ಸವದ ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.