ಶಿರ್ತಾಡಿ-ವಾಲ್ಪಾಡಿ ಖಾಝಿಯಾಗಿ ತ್ವಾಕಾ ಉಸ್ತಾದ್ ಹೊಣೆಗಾರಿಕೆ ಸ್ವೀಕಾರ
ಮಂಗಳೂರು, ಸೆ.13: ಶಿರ್ತಾಡಿ-ವಾಲ್ಪಾಡಿಯಲ್ಲಿ ಮೊಹಿದ್ದೀನ್ ಜುಮಾ ಮಸೀದಿಯ ಖಾಝಿಯಾಗಿ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಶುಕ್ರವಾರ ಹೊಣೆಗಾರಿಕೆ ಸ್ವೀಕರಿಸಿದರು.
ಸೈಯದ್ ಹುಸೈನ್ ಬಾಅಲವಿ ತಂಳ್ ಕುಕ್ಕಾಜೆ ಅವರು ಪೇಟ ತೊಡಿಸುವುದರೊಂದಿಗೆ ಖಾಝಿ ಬೈಅತ್ ಮಾಡಿದರು. ಜಮಾಅತ್ ಅಧ್ಯಕ್ಷ ಎಂ.ಎಂ. ಶರೀಫ್ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಿ ಮಸೀದಿಯ ಖತೀಬ್ ಸಿರಾಜುದ್ದೀನ್ ಫೈಝಿ ಖಾಝಿ ಅವರ ಪರಿಚಯ ಮಾಡಿದರು. ಐ.ಕೆ. ಮೂಸಾ ದಾರಿಮಿ ಹಾಗೂ ಮೂಡಬಿದಿರೆ ಖತೀಬ್ ಸಿದ್ದೀಕ್ ದಾರಿಮಿ ಮಾತನಾಡಿದರು. ಈ ಸಂದರ್ಭ ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕೊಟಿಕುಳಂನ ಖತೀಬ್ ಅಬ್ದುಲ್ ಖಾದರ್ ಸಅದಿ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ದಾರುನ್ನೂರ್ ಎಜುಕೇಷನ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ ಸಮದ್, ಹಾಜಿ ಅಬ್ದುಲ್ ರಹ್ಮಾನ್ ಅಸ್ಕೋ, ಜಮಾಅತ್ ಗೌರವಾಧ್ಯಕ್ಷ ಮುಹಮ್ಮದ್ ಮಕ್ಕಿ, ಕಾರ್ಯದರ್ಶಿ ಝಕರಿಯಾ ಯೂಸುಫ್, ಸುಲೈಮಾನ್ ಸಅದಿ, ಅಬೂಬಕ್ಕರ್ ಮೂಡುಬಿದಿರೆ, ಹಂಡೆಲು ಜಮಾಅತ್ ಅಧ್ಯಕ್ಷ ಎಚ್.ಎಂ. ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
ಸ್ಥಳೀಯ ಮಸೀದಿಯ ಖತೀಬ್ ಡಿ.ಅಬ್ಬಾಸ್ ಫೈಝಿ ದಿಡುಪೆ ಸ್ವಾಗತಿಸಿದರು. ಅಶ್ರಫ್ ನಮ್ಮ ಬಿದ್ರೆ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಹಕೀಂ ಅಶ್ರಫಿ ವಂದಿಸಿದರು.