ಮೀಫ್ ವಾರ್ಷಿಕ ಚಟುವಟಿಕೆಗಳಿಗೆ ಅನುಮೋದನೆ

Update: 2023-08-01 05:38 GMT

ಮಂಗಳೂರು: ದ.ಕ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ (ಮೀಫ್) ಸಂಸ್ಥೆಯ ಪ್ರಥಮ ಕಾರ್ಯಕಾರಿಣಿ ಸಭೆ ಲೈಟ್ ಹೌಸ್ ಹಿಲ್ಸ್ ನಲ್ಲಿರುವ ಸಂಸ್ಥೆಯ ಕಛೇರಿ ಯಲ್ಲಿ ಜರಗಿತು.

ಅಧ್ಯಕ್ಷತೆಯನ್ನು ಮೂಸಬ್ಬ ಪಿ. ಬ್ಯಾರಿಯವರು ವಹಿಸಿದ್ದರು. ಸಭೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾಯೋಜನೆ ಯನ್ನು ಅಂಗೀಕರಿಸಲಾಯಿತು.

ಮೀಫ್ ಗೆ ಒಳಪಟ್ಟ ಉಭಯ ಜಿಲ್ಲೆಗಳ ಎಲ್ಲಾ ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮತ್ತು ಪೋಷಕರ ಸಭೆ ನಡೆಸಿ ಆಸಕ್ತ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಮಂಗಳೂರಿನಲ್ಲಿ ಏಸ್ ಫೌಂಡೇಶನ್ ಸಹಬಾಗಿತ್ವದಲ್ಲಿ ತರಬೇತಿ ನೀಡುವುದು ಎಂದು ಏಸ್ ಫೌಂಡೇಶನ್ ನಝೀರ್ ಈ ಬಗ್ಗೆ ಮಾಹಿತಿ ನೀಡಿದರು.

ಯೇನಪೋಯ ಕಾಲೇಜು, ಬರಾಕಾ ಕಾಲೇಜು ಗಳಲ್ಲಿ ಈಗಾಗಲೇ ಉಚಿತ ಸೀಟ್ ಗಳನ್ನು ನೀಡುತ್ತಿದ್ದು, ಮುಂದಿನ ವರ್ಷ ಮಂಗಳೂರು ಮತ್ತು ಬೆಂಗಳೂರು ಪ್ರತಿಷ್ಠಿತ ಕಾಲೇಜು ಗಳಲ್ಲಿ ಪಿಯುಸಿ, ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಮುಂತಾದ ಕೋರ್ಸ್ ಗಳಿಗೆ ಉಚಿತ ಸೀಟ್ ಗಳನ್ನು ನೀಡುವ ಬಗ್ಗೆ ಆಡಳಿತ ಮಂಡಳಿ ಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದು ಎಂದು ತೀರ್ಮಾನಿಸಲಾಯಿತು.

ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ವಿಷಯವಾರು ತರಬೇತಿ, ಗಣಿತ, ವಿಜ್ಞಾನ ಶಿಕ್ಷಕರಿಗೆ ತರಬೇತಿ, ಮೊಂಟೆಸ್ಸೆರಿ ಶಿಕ್ಷಕರಿಗೆ ತರಬೇತಿ, ಶಿಕ್ಷಕರಿಗೆ ಪ್ರಶಸ್ತಿ, ಬೆಸ್ಟ್ ಸ್ಕೂಲ್ ಅವಾರ್ಡ್ಸ್, ಪ್ರತಿಭಾಪುರಸ್ಕಾರ, ಟ್ಯಾಲೆಂಟ್ ಹಂಟ್, ಕ್ರೀಡೋತ್ಸವ, ಆಡಳಿತ ವರ್ಗಕ್ಕೆ ದಾಖಲೆ ನಿರ್ವಹಣೆ ತರಬೇತಿ, ಮೊದಲಾದ ಕಾರ್ಯಯೋಜನೆಗಳನ್ನು ಕಾರ್ಯದರ್ಶಿ ರಿಯಾಜ್ ಮಂಡಿಸಿದರು.

ಗೌರವಾಧ್ಯಕ್ಷ ಉಮರ್ ಟೀಕೆ, ಉಪಾಧ್ಯಕ್ಷ ಮುಸ್ತಫ ಸುಳ್ಯ, ಪದಾಧಿಕಾರಿಗಳಾದ ನಿಸಾರ್, ಇಲ್ಯಾಸ್ ಕಾಟಿಪ್ಪಳ್ಳ, ಶಾರೀಕ್, ಮುಸ್ತಫ ಸಅದಿ ಮುಳೂರು ಚರ್ಚೆಯಲ್ಲಿ ಪಾಲ್ಗೊಂಡರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News