ಸೆ.15ರವರೆಗೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ ಆರ್ಟಿಸ್ಟ್ರಿ ಜುವೆಲ್ಲರಿ ಪ್ರದರ್ಶನ

Update: 2024-09-07 14:20 GMT

ಮಂಗಳೂರು, ಸೆ.7: ನಗರದ ಫಳ್ನೀರ್ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ ಆರ್ಟಿಸ್ಟ್ರಿ ಜುವೆಲ್ಲರಿ ಪ್ರದರ್ಶನ ಶನಿವಾರ ಆರಂಭಗೊಂಡಿದ್ದು, ಸೆ.15ರವರೆಗೆ ನಡೆಯಲಿದೆ.

ಪ್ರಸಕ್ತ ಮತ್ತು ಸಾಂಪ್ರದಾಯಿಕ ಶೈಲಿಯ ಜುವೆಲ್ಲರಿಯನ್ನು ಇಂಡಿಯಾನ ಆಸ್ಪತ್ರೆಯ ವೈದ್ಯೆ ಡಾ.ಶಮ್ನಾ ಮಿನಾಝ್, ನಟಿ ಸಲೋಮೆ ಡಿಸೋಜ, ಮಿಸ್ ಮಂಗಳೂರು- 2024ರ ವಿಜೇತೆ ಅನನ್ಯಾ ಐತಾಳ್ ಅನಾವರಣಗೊಳಿಸಿದರು.

ಡಾ.ಶಮ್ನಾ ಮಿನಾಝ್ ಮಾತನಾಡಿ ನಮ್ಮ ಕುಟುಂಬದ ಸದಸ್ಯರು ಮಲಬಾರ್ ಗೋಲ್ಡ್‌ನ ಆರಂಭದ ದಿನಗಳಿಂದಲೇ ಗ್ರಾಹಕರಾಗಿದ್ದಾರೆ. ಇಲ್ಲಿ ನಮ್ಮ ಇಷ್ಟದ ಆಭರಣಗಳು ಲಭ್ಯವಿದೆೆ. ಆಭರಣ ಖರೀದಿಯ ಸಂದರ್ಭವು ನಮಗೆ ಮಲಬಾರ್ ಗೋಲ್ಡ್ ಮಳಿಗೆಯು ನೆನಪಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಲೋಮೆ ಡಿಸೋಜ ಮಾತನಾಡಿ ಆಭರಣ ಖರೀದಿಸಲು ಮಲಬಾರ್ ಗೋಲ್ಡ್ ಮಳಿಗೆಗೆ ಬರುವುದೆಂದರೆ ನಮಗೆ ಎಲ್ಲಿಲ್ಲದ ಖುಷಿ. ನಮ್ಮ ಪ್ರಥಮ ಆದ್ಯತೆಯೂ ಮಲಬಾರ್ ಗೋಲ್ಡ್ ಆಗಿದೆ. ಯಾಕೆಂದರೆ ಇಲ್ಲಿ ಎಲ್ಲಾ ವಿನ್ಯಾಸದ ಆಭರಣ ಗಳಿವೆ. ಗ್ರಾಹಕರ ಮನಸ್ಸನ್ನು ಮಲಬಾರ್ ಗೋಲ್ಡ್ ಸದಾ ಗೆಲ್ಲುತ್ತಲೇ ಇದೆ ಎಂದರು.

ಅನನ್ಯ ಐತಾಳ್ ಮಾತನಾಡಿ ಮಲಬಾರ್ ಗೋಲ್ಡ್‌ನಲ್ಲಿ ಆಭರಣಗಳ ಅಪಾರ ಸಂಗ್ರಹವೇ ಇದೆ. ಗ್ರಾಹಕರಿಗೆ ಉತ್ತಮ ಸೇವೆಯೂ ಇಲ್ಲಿ ಲಭ್ಯವಿದೆ. ಗ್ರಾಹಕರು ಇಚ್ಛೆ ವ್ಯಕ್ತಪಡಿಸಿದ ಆಭರಣವು ಸದಾ ಕಾಲ ಲಭ್ಯವಾಗುತ್ತಿರುವುದು ಇಲ್ಲಿನ ವೈಶಿಷ್ಟ್ಯ ಎಂದರು.

ಈ ಸಂದರ್ಭ ಸ್ಟೋರ್ ಹೆಡ್ ಶರತ್‌ಚಂದ್ರನ್, ಅಸಿಸ್ಟೆಂಟ್ ಸ್ಟೋರ್ ಹೆಡ್ ಮುನವ್ವರ್ ಶಾನ್, ಶೋರೂಮ್ ಮ್ಯಾನೇಜರ್ ರಘುರಾಮ್, ಸೇಲ್ಸ್ ಮ್ಯಾನೇಜರ್ ಗಿರೀಶ್, ಡೆಪ್ಯುಟಿ ಮ್ಯಾನೇಜರ್ ಮುಹಮ್ಮದ್ ಸಮೀರ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್, ಸೊನಾಲ್ ಸುವರ್ಣ ಉಪಸ್ಥಿತರಿದ್ದರು.

*ಸರ್ವರೂ ಸದಾ ಒಪ್ಪುವಂತಹ ಅಪೂರ್ವವಾದ ಹಲವು ವಿನ್ಯಾಸಗಳ ಚಿನ್ನ ಮತ್ತು ವಜ್ರದ ಆಭರಣಗಳ ಸಂಗ್ರಹವು ಇಲ್ಲಿದೆ. ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಬೇಕಾದ ಉತ್ತಮ ಗುಣಮಟ್ಟದ ಆಭರಣಗಳು ಮಿತದರದಲ್ಲಿ ಲಭ್ಯವಿದೆ. ಪ್ರತಿಯೊಂದು ಆಭರಣವು ತನ್ನದೇ ಆದ ವೈಶಿಷ್ಯತೆಯನ್ನು ಹೊಂದಿದೆ. ವಧುಗಳಿಗೆ ವಿಶೇಷವಾಗಿ ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ಚಿನ್ನಾಭರಣಗಳು ಲಭ್ಯವಿದೆ. ಗುಣಮಟ್ಟದಲ್ಲಿ ರಾಜಿ ಇಲ್ಲದಿರುವುದು ಮತ್ತು ಗ್ರಾಹಕರ ಮನಸ್ಸನ್ನೂ ಸದಾ ಗೆಲ್ಲುವುದು ಮಲಬಾರ್ ಗೋಲ್ಡ್‌ನ ವಿಶೇಷತೆಯಾಗಿದೆ. ಹೊಸ ಹೊಸ ಪ್ರದರ್ಶನಗಳ ಮೂಲಕ ಮಲಬಾರ್ ಗೋಲ್ಡ್ ಖ್ಯಾತಿ ಪಡೆದಿದೆ.

*ಕೇರಳದ ಕೋಝಿಕ್ಕೋಡ್‌ನಲ್ಲಿ ಎಂಪಿ ಅಹ್ಮದ್ ಅವರಿಂದ 1993ರಲ್ಲಿ ಸ್ಥಾಪನೆಗೊಂಡ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಪ್ರಸಕ್ತ 13 ರಾಷ್ಟ್ರಗಳಲ್ಲಿ 355 ಶೋರೂಮ್‌ಗಳನ್ನು ಹೊಂದಿದೆ. ಪ್ರತೀ ಗ್ರಾಹಕರಿಗೆ ಪಾರದರ್ಶಕತೆ, ಜೀವನ ಪರ್ಯಂತ ನಿರ್ವಹಣೆ, ಆಭರಣಗಳ ವಿನಿಮಯದಲ್ಲಿ ಶೂನ್ಯ ಕಡಿತ, ಶೇ.100 ಬಿಐಎಸ್ ಹಾಲ್‌ಮಾರ್ಕ್ ಹೊಂದಿದ ಚಿನ್ನ, ಐಜಿಐ ಮತ್ತು ಜಿಐಎ ಪ್ರಾಮಾಣೀಕೃತ ಡೈಮಂಡ್ಸ್, ಮರು ಖರೀದಿ, ಪ್ರೋತ್ಸಾಹಕ ವಿಮೆ ಯೋಜನೆ, ಪಾರದರ್ಶಕ ದರ ನೀತಿ, ಉತ್ತಮ ಗುಣಮಟ್ಟದ ಉತ್ಪನ್ನ ಮತ್ತು ಸಿಬ್ಬಂದಿ ಸೇವೆಯ ಭರವಸೆಯನ್ನು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನೀಡಲಿದೆ ಎಂದು ಪ್ರಕಟನೆ ತಿಳಿಸಿದೆ.
















 


 


 


 


 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News