ಬಂಟ್ವಾಳ : ಬಾಲಕಿಗೆ ಕಿರುಕುಳ; ಆರೋಪಿ ಸೆರೆ
Update: 2023-08-14 17:36 GMT
ಬಂಟ್ವಾಳ : ಶಾಲಾ ಬಾಲಕಿಯ ಕೈ ಹಿಡಿದು ಎಳೆದ ಆರೋಪದಲ್ಲಿ ಯುವಕನೋರ್ವನ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಸರಪಾಡಿ ಗ್ರಾಮದ ಕುದ್ಕುಂಜ ನಿವಾಸಿ ಸುಕೇಶ್ ಗೌಡ ಆರೋಪಿಯಾಗಿದ್ದು, ಈತನಿಗೆ ನ್ಯಾಯಾಂಗ ಬಂಧನವಾಗಿದೆ.
ಬಾಲಕಿ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಸುಕೇಶ್ ಗೌಡ ಬಾಲಕಿಯ ಕೈ ಹಿಡಿದು ಎಳೆದಿದ್ದಾನೆ. ಈತ ಬಾಲಕಿಯ ಬೆನ್ನ ಹಿಂದೆ ಹೋಗುವುದನ್ನು ನೋಡಿದ ರಿಕ್ಷಾ ಚಾಲಕರು ಸಂಶಯಗೊಂಡು ಈತನನ್ನು ಹಿಂಬಾಳಿಸಿ ಕೊಂಡು ಹೋಗಿದ್ದು, ಬಾಲಕಿಯ ಕೈ ಹಿಡಿದು ಎಳೆಯುತ್ತಿದ್ದ ವೇಳೆ ಸುಕೇಶ್ ಗೌಡನನ್ನು ಹಿಡಿದ ರಿಕ್ಷಾ ಚಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಸುಕೇಶ್ ಗೌಡನನ್ನು ಬಂಧಿಸಿದ್ದಾರೆ.