ವಿಟ್ಲ: ಬೃಹತ್ ರಕ್ತದಾನ ಶಿಬಿರ, ಸನ್ಮಾನ ಕಾರ್ಯಕ್ರಮ
ವಿಟ್ಲ: ಡಿ’ ಗ್ರೂಪ್(ರಿ) ವಿಟ್ಲ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ವತಿಯಿಂದ ವಿಟ್ಲದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ವಿಟ್ಲದ ಸ್ಮಾರ್ಟ್ ಸಿಟಿ ಮುಂಭಾಗದಲ್ಲಿ ನಡೆಯಿತು.
ಹಾಜಿ ಅಬ್ದುಲ್ ಹಕೀಮ್ ಅರ್ಷದಿ ದುವಾ ನಿರ್ವಹಿಸಿದರು. ಡಿ’ ಗ್ರೂಪ್ ಅಧ್ಯಕ್ಷರಾಗಿರುವ ರಿಯಾಝ್ ವಿ.ಹೆಚ್ ರಕ್ತದಾನ ಮಾಡುವುದರೊಂದಿಗೆ ಉದ್ಘಾಟನೆಯನ್ನು ನೆರವೇರಿಸಿದರು.
ಅಂತರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದಿರುವ ಧನ್ವಿ ಸಣ್ಣಗುತ್ತು ಇವರಿಗೆ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಗೌರವಧ್ಯಕ್ಷ ಅಝೀಝ್ ಸನಾ, ಉಪಾಧ್ಯಕ್ಷ ಇಕ್ಬಾಲ್ ಶೀತಲ್, ನಿಕಟಪೂರ್ವ ಅಧ್ಯಕ್ಷ ಕಲಂದರ್ ಪರ್ತಿಪ್ಪಾಡಿ, ಪ್ರಧಾನ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಜೊತೆ ಕಾರ್ಯದರ್ಶಿ ಹಂಝ ವಿ.ಕೆ.ಎಂ, ಕೋಶಾಧಿಕಾರಿ ಬಷೀರ್ ಬೊಬ್ಬೆಕೇರಿ, ಸ್ಥಾಪಕಾಧ್ಯಕ್ಷರಾಗ ಸಮದ್ ಏರ್ ಸೌಂಡ್ಸ್, ಡಿ’ ಗ್ರೂಪ್ ಆಂಬುಲೆನ್ಸ್ ನಿರ್ವಾಹಕರಾಗಿರುವ ಹಂಝ ವಿ, ರಫೀಕ್ ಪೊನ್ನೋಟು, ಉಬೈದ್ ವಿಟ್ಲ ಬಝಾರ್, ಬ್ಲಡ್ ಡೋನರ್ಸ್ ಮಂಗಳೂರು ಸ್ಥಾಪಕಾಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಡಿ’ ಗ್ರೂಪ್ ಇದರ ಸದಸ್ಯರಾದ ರಾಝಿ ಡಿ, ಪತ್ರಕರ್ತ ಮಹಮ್ಮದ್ ಅಲಿ, ಇಸ್ಮಾಯಿಲ್ ಒಕ್ಕೆತ್ತೂರು, ಸಪ್ವಾನ್ ಕರ್ನಾಟಕ, ರಮೀಝ್, ಸಿಬಾಕ್, ಬ್ಲಡ್ ಡೋನರ್ಸ್ ಮಂಗಳೂರು ಕಾರ್ಯನಿರ್ವಹಕ ತೌಫೀಕ್ ಕುಳಾಯಿ, ಮನ್ಸೂರ್ ಬಿ ಸಿ ರೋಡ್, ಸದಸ್ಯರಾದ ಸಫ್ವನ್ ಕುಳವೂರು ಹಾಗೂ ಯೆನಪೋಯ ವೈಧ್ಯಾದಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಉಕ್ಕುಡ ಮುಹ್ಯುಸ್ಸುನ್ನ ದರ್ಸ್ ನ ಸುಮಾರು ಇಪ್ಪತ್ತು ವಿದ್ಯಾರ್ಥಿಗಳು ಒಟ್ಟಾಗಿ ರಕ್ತದಾನ ಮಾಡಿದ್ದು ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಾದ್ಯಮ ಕಾರ್ಯದರ್ಶಿ ಅಬೂಬಕ್ಕರ್ ಅನಿಲಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು.