ಪುನರೂರು: ಮುಹಮ್ಮದೀಯ ಜುಮಾ ಮಸೀದಿ, ಮುಹಿಯುದ್ದೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿಯಿಂದ ಜಲಾಲಿಯಾ ರಾತೀಬ್

Update: 2025-01-14 07:20 GMT

ಕಿನ್ನಿಗೋಳಿ: ಮುಹಮ್ಮದೀಯ ಜುಮಾ ಮಸೀದಿ ಹಾಗೂ ಮೊಹಿಯುದ್ದೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ ಪುನರೂರು ಇದರ ವತಿಯಿಂದ 18ನೇ ವರ್ಷದ ಜಲಾಲಿಯಾ ರಾತೀಬ್ ಮಸೀದಿ ವಠಾರದಲ್ಲಿ ನಡೆಯಿತು.

ರಾತೀಬ್ ಮಜ್ಲಿಸ್ ನೇತೃತ್ವವನ್ನು ಅಸ್ಸಯ್ಯದ್‌ ಜ‌ಅ್‌ಫರ್ ಸ್ವಾದಿಕ್ ತಂಙಳ್ ಕುಂಬೋಳ್ ವಹಿಸಿದ್ದರು. ಇದೇ ಸಂದರ್ಭ ಮಸೀದಿಯ ಹಿತೈಷಿಗಳಾದ ಅಹ್ಮದ್ ಹಾಜಿ ಕಲ್ಕರೆ, ಮುಹಮ್ಮದ್ ಶರೀಫ್ ಕಾಟಿಪಳ್ಳ ಹಾಗೂ ದುಬೈ ಅಹ್ಮದ್ ಹಾಜಿ ಉಚ್ಚಿಲ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮುಹಮ್ಮದೀಯ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಹಾಜಿ, ಖತೀಬ್ ಮುಹಮ್ಮದ್ ಅಶ್ರಫ್ ಸ‌ಅದಿ, ಮಿಸ್ಬಾಹುಲ್ ಮದೀನ ಕಲ್ಕರೆ ಪ್ರಾಂಶುಪಾಲ ಎ.ಪಿ‌. ಅಬ್ದುಲ್ಲ ಮದನಿ, ಮ್ಯಾನೇಜರ್ ಹಸನ್ ಸಖಾಫಿ ಅಲ್ ಫುರ್ಖಾನಿ, ಎಂಜೆಎಂ ಕಿನ್ನಿಗೋಳಿ ಖತೀಬ್ ಮುಹಮ್ಮದ್ ನೌಶಾದ್ ಅಝ್‌ಹರಿ, ಸಹ ಉಸ್ತಾದ್ ಅಬೂಬಕ್ಕರ್ ಸಿದ್ದೀಕ್, ಮಾಜಿ ಖತೀಬ್ ಅಬ್ದುಲ್ ಲತೀಫ್ ಸಖಾಫಿ, ಬಿಜೆಎಂ ಅಂಗರಗುಡ್ಡೆ ಖತೀಬ್ ಇಸ್ಮಾಯಿಲ್ ದಾರಿಮಿ, ಅಧ್ಯಕ್ಷ ನಿಸಾರ್ ಅಹ್ಮದ್, ಅಲ್ ಇಖ್ಲಾಸ್ ಜುಮಾ ಮಸೀದಿ ಖತೀಬ್ ಫಾರೂಕ್ ಸಖಾಫಿ, ಎಂವೈಎ ಅಧ್ಯಕ್ಷ ಪಿ.ಎಸ್. ಅಫ್ತಾಬ್ ಅಹ್ಮದ್ ಮಿಲನ್, ಇಬ್ರಾಹಿಂ ಶೇಖ್, ಟಿ. ಮಯ್ಯದ್ದಿ, ಸಿದ್ದೀಕ್ ಪುನರೂರು, ಉಮರ್ ಅಸಾದಿ, ರಫೀಕ್ ಫ್ಲವರ್, ಅದ್ದು ಅಂಗರಗುಡ್ಡೆ, ಸಜ್ಜಾದ್ ಆಲಂ ನೂರಿ ಮತ್ತಿತ್ತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News