ಮಜಿರ್ಪಳ್ಳ: ಸೈಫುಲ್ ಹುದಾ ದಫ್ ಕಮಿಟಿ ವತಿಯಿಂದ ರಕ್ತದಾನ ಶಿಬಿರ

Update: 2025-01-14 16:31 GMT

ಮಜಿರ್ಪಳ್ಳ: ಸೈಫುಲ್ ಹುದಾ ದಫ್ ಕಮಿಟಿ ಕೋಳ್ಯೂರು ಇದರ ವತಿಯಿಂದ ಆಯೋಜಿಸಿರುವ ‘ಧಾರ್ಮಿಕ ಕಾರ್ಯಕ್ರಮ’ ಜನವರಿ 12 ರಿಂದ 19 ರವರೆಗೆ ಕೋಳ್ಯೂರಿನ ಜುಮಾ ಮಸೀದಿ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮ ಇಂದು 60ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಕಾರ್ಯಕ್ರಮದ ಅಂಗವಾಗಿ ಜ.14 ರಂದು ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 12:30 ರವರೆಗೆ ಮಜಿರ್ಪಳ್ಳ ನಗರದಲ್ಲಿ ರಕ್ತದಾನ ಅಭಿಯಾನವನ್ನು ನಡೆಸಲಾಯಿತು.

ಕೋಳ್ಯೂರು ಜಮಾಅತ್ ಕಮಿಟಿ ಹಾಗೂ ಸೈಫುಲ್ ಹುದಾ ದಫ್ ಸಮಿತಿಯ ಉಪಸ್ಥಿತಿಯಲ್ಲಿ ಕೋಳ್ಯೂರು ಮಸೀದಿ ಖತೀಬ್ ಹಂಝ ಸಅದಿ ಅಲ್ ಅಫ್ಲಲಿ ಉಸ್ತಾದ್ ರವರು ಪ್ರಾರ್ಥನೆಯೊಂದಿಗೆ ರಕ್ತದಾನಕ್ಕೆ ಚಾಲನೆ ನೀಡಿದರು. ಈ ಮಹಾ ಕಾರ್ಯಕ್ರಮದಲ್ಲಿ ಹಲವಾರು ನಾಗರಿಕರು ರಕ್ತದಾನ ಮಾಡಿ ಸಂತಸ ಹಂಚಿಕೊಂಡರು. 60ನೇ ವಾರ್ಷಿಕೋತ್ಸವದ ಅಂಗವಾಗಿ ಆಧ್ಯಾತ್ಮಿಕ ಕೂಟ, ರಕ್ತದಾನ, ಅನಿವಾಸಿಗಳ ಸಮಾವೇಶ, ಹಳೆ ವಿದ್ಯಾರ್ಥಿಗಳ ಸಮಾವೇಶ ಸೇರಿದಂತೆ ಹಲವು ಯೋಜನೆಗಳು ನಡೆಯುತ್ತಿವೆ. ಜ.12 ರಂದು ರಾತ್ರಿ 8 ಗಂಟೆಗೆ ಆರಂಭವಾದ ಧಾರ್ಮಿಕ ಪ್ರವಚನ ಜನವರಿ 18 ರಂದು ಕೊನೆಗೊಳ್ಳಲಿದ್ದು, 19 ರಂದು ಬೆಳಿಗ್ಗೆ 10 ಗಂಟೆಗೆ ರಾತೀಬ್ ಮತ್ತು 4 ಗಂಟೆಗೆ ತಬರ್ರುಕ್ ವಿತರಣೆಯೊಂದಿಗೆ ಸೈಫುಲ್ ಹುದಾ ದಫ್ ಕಮಿಟಿ ಕೋಳ್ಯೂರು 60 ನೇ ವಾರ್ಷಿಕ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News