ಡೀಸೆಲ್ ಕಳವು ಪ್ರಕರಣ: ಆರೋಪಿಗಳ ಬಂಧನ, ಸೊತ್ತು ವಶ

Update: 2025-01-14 17:45 GMT

ಮಂಗಳೂರು, ಜ.14: ಮಂಗಳೂರು ತಾಲೂಕಿನ ಬಾಳ ಗ್ರಾಮದ ಟ್ಯಾಂಕರ್ ಯಾರ್ಡಿನಲ್ಲಿರುವ ಟ್ಯಾಂಕರುಗಳಿಂದ ಮಾಲಕರಿಗೆ ತಿಳಿಯದೇ ಡೀಸೆಲ್‌ನ್ನು ಕಳವು ಮಾಡಿ ಅಕ್ರಮವಾಗಿ ಡೀಸಿಲನ್ನು ದಾಸ್ತಾನು ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಮಂಗಳೂರು ನಗರ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.

ಕುಳಾಯಿಗುಡ್ಡೆಯ ಸಂತೋಷ್ ( 42 ), ಕಾಟಿಪಳ್ಳದ ಐರನ್ ರಿತೇಶ್ ಮಿನೇಜ್ ( 36 ), ಟ್ಯಾಂಕರ್ ಚಾಲಕ ಕಡಿರುದ್ಯಾವರ, ನಾರಾಯಣ ( 23 ) ಮತ್ತು ಹೆಜಮಾಡಿಯ ರವಿ ಜನಾಂದ್ರ ಪುತ್ರನ್ (59) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳು ಶೇಖರಿಸಿಟ್ಟಿದ್ದ 1685 ಲೀಟರ್ ಡಿಸೇಲ್ ಮತ್ತು 20 ಲೀಟರ್ ಪೆಟ್ರೋಲ್, ಮೊಬೈಲ್ ಫೋನ್ -4, ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2,02,000 ರೂ, ಡೀಸೆಲ್ ಮತ್ತು ಪೆಟ್ರೋಲ್‌ನ ಮೌಲ್ಯ 1,52,000 ರೂ. ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ರವಿವಾರ ಖಚಿತ ಮಾಹಿತಿಯಂತೆ ದಾಳಿ ನಡೆಸಿದಾಗ ಆರೋಪಿಗಳು ಟ್ಯಾಂಕರ್‌ನಿಂದ ಡೀಸೆಲ್ ಮತ್ತು ಪೆಟ್ರೋಲ್ ಕದಿಯುವ ಪ್ರಕರಣ ಬೆಳಕಿಗೆ ಬಂತು ಎನ್ನಲಾಗಿದೆ.

ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News