ಬೆಳ್ತಂಗಡಿ: ಪರಪ್ಪು ಮಖಾಂ ಉರೂಸ್ ಗೆ ಚಾಲನೆ

Update: 2025-01-14 13:28 GMT

ಬೆಳ್ತಂಗಡಿ: ಗೇರುಕಟ್ಟೆ, ಪರಪ್ಪುವಿನಲ್ಲಿರುವ ವಲಿಯುಲ್ಲಾಹಿ ಫಕೀರ್ ಮುಹ್ಯುದ್ದೀನ್ (ಖ.ಸಿ) ರವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಇಂದು ಚಾಲನೆಗೊಳ್ಳಲಿದೆ.

ಜನವರಿ 14 ರಿಂದ ಆರಂಭಗೊಂಡು 18 ರವರೆಗೆ ಉರೂಸ್ ಸಮಾರಂಭ ನಡೆಯಲಿದ್ದು ಸಮಾರೋಪ ಸಮಾರಂಭಕ್ಕೆ ಇಂಡಿಯನ್ ಗ್ಯ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ನೇತ್ರತ್ವವನ್ನು ವಹಿಸಲಿದ್ದಾರೆ.

ಜ.14ರಂದು ಮಗ್‌ರಿಬ್ ನಮಾಝಿನ ಬಳಿಕ ಉರೂಸ್ ಉದ್ಘಾಟನೆಯನ್ನು ಅಲ್‌ಹಾಜ್ ಇಬ್ರಾಹಿಂ ಮದನಿ ಕಂಬಳಬೆಟ್ಟು, ಅಸ್ಸಯ್ಯದ್ ಝೈನುಲ್ ಆಬಿದೀನ್ ಜಮಲುಲೈಲಿ ತಂಙಳ್ ಕಾಜೂರು ದುವಾಶೀರ್ವಚನ ಗೈಯ್ಯಲಿದ್ದಾರೆ. ತಾಜುಲ್ ಉಲಮಾ, ಖುರ್ರತುಸ್ಸಾದಾತ್ ಅನುಸ್ಮರಣಾ ಪ್ರಭಾಷಣ ಮತ್ತು ಮದನಿಯಂ ಮಜ್ಲಿಸ್ ನೇತೃತ್ವವನ್ನು ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ವಹಿಸಲಿದ್ದಾರೆ. ಖತೀಬರಾದ ಎಫ್.ಎಚ್. ಮುಹಮ್ಮದ್ ಮಿಸ್ಬಾಹಿ ಅಲ್-ಫುರ್ಖಾನಿ ಪ್ರಾಸ್ತಾವಿಕ ವಾಗಿ ಮಾತನಾಡಲಿದ್ದಾರೆ. ಉರೂಸ್ ಸಮಿತಿಯ ಅಧ್ಯಕ್ಷರಾದ ಜಿ.ಡಿ. ಅಶ್ರಫ್ ಅಧ್ಯಕ್ಷತೆ ವಹಿಸಲಿದ್ದಾರೆ.

ಜ.15ರಂದು ರಾತ್ರಿ 8 ಗಂಟೆಗೆ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಮಸ್‌‌ಊದ್ ಅಲ್ ಬುಖಾರಿ ತಂಙಳ್ ಕೂರತ್ ದುವಾಶೀರ್ವಚನಗೈದು, ಪೇರೋಡು ಮುಹಮ್ಮದ್ ಅಝ್ ಹರಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ.

ಜ.16 ರಂದು ಅಸ್ಪಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ಬಾಅಲವಿ ತಂಙಳ್ ದುವಾಶೀರ್ವಚನಗೈದು, ಎಫ್.ಎಚ್. ಮುಹಮ್ಮದ್ ಮಿಸ್ಟಾಹಿ ಅಲ್-ಫುರ್ಖಾನಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. ಜ.17ರಂದು ಅಸ್ಸಯ್ಯದ್ ಜಝೀಲ್ ಜಮಲುಲೈಲಿ ಅಸ್ಸಖಾಫಿ ತಂಙಳ್ ಮುದರ್ರಿಸ್ ಮರ್ಕಝ್ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ.

ಜ.18ರಂದು ಉರೂಸ್ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 5 ಗಂಟೆಗೆ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ನೇತೃತ್ವದಲ್ಲಿ ಖತುಮುಲ್ ಖುರ್ ಆನ್ ಪಾರಾಯಣ ಮತ್ತು ಸಾಮೂಹಿಕ ಝಿಯಾರತ್ ನಡೆಯಲಿದೆ. ಮಗ್‌ರಿಬ್ ನಮಾಝಿನ ಬಳಿಕ ಉದ್ಘಾಟನೆಯನ್ನು ಇಂಡಿಯನ್ ಗ್ರ್ಯಾಂಡ್ ಮುಪ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾ‌ರ್ ಕಾಂತಪುರಂ ನೆರವೇರಿಸಲಿದ್ದಾರೆ. ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಅಲ್ ಬುಖಾರಿ ಕಡಲುಂಡಿ ದುವಾಶೀರ್ವಚನ ನಡೆಸಲಿದ್ದಾರೆ. ಅಸ್ಸಯ್ಯದ್ ಉಮರ್ ಅಸ್ಸಖಾಫ್ ತಂಙಳ್ ಮನ್‌ಶರ್‌ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಹಂಝ ಮಿಸ್ಟಾಹಿ ಓಟ್ಟಪದವು ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್, ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿಯಾದ ಕೆ.ಎ.ಹಿದಾಯತ್ತುಲ್ಲ, ಮಂಗಳೂರಿನ ಜನಪ್ರಿಯ ಆಸ್ಪತ್ರೆಯ ಚೆಯರ್‌ಮ್ಯಾನ್ ಡಾ.ಅಬ್ದುಲ್ ಬಶೀರ್ ವಿ.ಕೆ. ಮತ್ತು ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಹಾಗೂ ಇನ್ನಿತರ ಹಲವಾರು ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಉರೂಸ್ ಸಮಿತಿಯ ಅಧ್ಯಕ್ಷರಾದ ಜಿ.ಡಿ. ಅಶ್ರಫ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News