ಕಿನ್ನಿಗೋಳಿ: ಅಪರೂಪದ ಮಣ್ಣು ಮುಕ್ಕ ಹಾವು ಪತ್ತೆ

Update: 2025-01-14 16:18 GMT

ಕಿನ್ನಿಗೋಳಿ: ಇಲ್ಲಿನ ಎಳತ್ತೂರು ಕಲ್ಕರೆಯ ದಿ. ಹಮೀದ್ ಹಾಜಿ ಅವರ ತೋಟದಲ್ಲಿ ಅಪರೂಪದ ಸ್ಯಾಂಡ್ ಬೋವಾ (ಮಣ್ಣು ಮುಕ್ಕ/ಮರಳು ಬೋವಾ) ಹಾವು ಮಂಗಳವಾರ ಪತ್ತೆಯಾಗಿದೆ.

ಹಾವು ಕಂಡು ವಿಚಲಿತರಾಗಿದ್ದ ಹಮೀದ್ ಹಾಜಿ‌ ಅವರ‌ ಕುಟುಂಬ ನೆರೆಯ ಕಲ್ಕರೆಯ ಪ್ರಗತಿಪರ ಯುವ ಕೃಷಿಕ ನೌಫಲ್ ಕಲ್ಕರೆ ಅವರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ‌ ಬಂದ ನೌಫಲ್ ಅವರು ಸ್ಯಾಂಡ್ ಬೋವಾ (ಮಣ್ಣು ಮುಕ್ಕ/ಮರಳು ಬೋವಾ) ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.



 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News