ಫೆ.2: ಸಾವಯವ ಕೃಷಿಕ ಗ್ರಾಹಕ ಬಳಗದಿಂದ ಎಲೆ ಅರಿವು ಕಾರ್ಯಕ್ರಮ

Update: 2025-01-14 13:16 GMT

ಮಂಗಳೂರು: ನಗರದ ಸಾವಯವ ಕೃಷಿಕ ಗ್ರಾಹಕ ಬಳಗ ದಿಂದ ಫೆ.2ರಂದು ಬೆಳಗ್ಗೆ 9.30 ರಿಂದ ಸಂಜೆ 5 ರ ತನಕಎಲೆ- ಅರಿವು ಎಂಬ ಕಾರ್ಯಕ್ರಮ ವನ್ನು ಶ್ರೀವತ್ಸ ಗೋವಿಂದ ರಾಜು ನಡೆಸಲಿದ್ದಾರೆ ಎಂದು ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷ ಜಿ.ಆರ್.ಪ್ರಸಾದ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಶ್ರೀವತ್ಸ ಗೋವಿಂದ ರಾಜು ಸುಸ್ಥಿರ ಕೃಷಿಕ, ಪ್ರಕೃತಿವಾದಿ, ಹಸಿರು ಉದ್ಯಮಿ ಮತ್ತು ಸುಸ್ಥಿರ ಜೀವನ ತರಬೇತುದಾರ 40 ಕ್ಕೂ ಹೆಚ್ಚು ದೇಶಗಳಲ್ಲಿ ಉನ್ನತ ಕಾರ್ಪೊರೇಟ್ ಕಂಪೆನಿಗಳಲ್ಲಿ ಕೆಲಸ ಮಾಡಿದ ಐಟಿ ವೃತ್ತಿಪರರು ತಮ್ಮ ಮೊದಲ ಪ್ರೀತಿಗೆ ಮರಳಿದ್ದಾರೆ. ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿರುತ್ತದೆಆಸಕ್ತ ರು ಮುಂಚಿತವಾಗಿ ಹೆಸರುನೊಂದಾಯಿಸಿ ಪಾಲ್ಗೊಳ್ಳಬೇಕಾಗಿ ವಿನಂತಿಸಿದ್ದಾರೆ.

ಶ್ರೀವತ್ಸ ಗೋವಿಂದರಾಜು 40ಕ್ಕೂ ಹೆಚ್ಚು ದೇಶಗಳಲ್ಲಿ ಉನ್ನತ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡಿದ ಐಟಿ ವೃತ್ತಿಪರರು ತಮ್ಮ ಮೊದಲ ಪ್ರೀತಿಯಾದ ಪ್ರಕೃತಿಗೆ ಮರಳಿದ್ದಾರೆ.

ಶ್ರೀವತ್ಸರವರು ತಮ್ಮ ನೇಚರ್ ಇನ್ಸಪೈರ್ಸ್ ಚಿಗುರು ಇಕೋಸ್ಪೇಸ್ (NICE) ಅನ್ನುವ ಜೀವವೈವಿಧ್ಯ ಕೇಂದ್ರ ಹಾಗು ವಿಷ ಮುಕ್ತ ತೋಟದಲ್ಲಿ ಸುಸ್ಥಿರ ಮತ್ತು ಭೂ-ಸ್ನೇಹಿ ಕೃಷಿಯಲ್ಲಿ ತೊಡಗಿಸಿಕೊಂಡು ಪ್ರಕೃತಿಯ ಮಡಿಲಿನಲ್ಲಿ ಸರಳ ಹಾಗೂ ಸುಂದರ ಜೀವನವನ್ನ ನಡೆಸುತ್ತಿದ್ದಾರೆ.

ಆಯುರ್ವೇದ ವೈದ್ಯರ ಮಗನಾಗಿ ಮತ್ತು ಅರಣ್ಯ ಬುಡಕಟ್ಟು ಜನಾಂಗದವರೊಂದಿಗೆ ಕೆಲಸ ಮಾಡಿದ ಶ್ರೀವತ್ಸ ಅವರು ಸ್ಥಳೀಯ ಸಸ್ಯ ಮತ್ತು ಪ್ರಾಣಿಗಳು, ಮರೆತುಹೋದ ಆಹಾರಗಳು ಮತ್ತು ಗಿಡಮೂಲಿಕೆಗಳ ಬಗ್ಗೆ ಉತ್ತಮಜ್ಞಾನವನ್ನು ಪಡೆದುಕೊಂಡಿದ್ದಾರೆ. ಸಾಮಾನ್ಯವಾಗಿ ಕಳೆಗಳು ಎಂದು ಕರೆಯಲ್ಪಡುವ ಉತ್ಪನ್ನಗಳನ್ನು ಒಳಗೊಂಡಂತೆ ತಮ್ಮ ಕೃಷಿ ಭೂಮಿ ನೀಡುವ ಯಾವುದೇ ನೈಸರ್ಗಿಕ ಉತ್ಪನ್ನಗಳ ಮೌಲ್ಯವನ್ನ ಉನ್ನತೀಕರಿಸಲು ನವೀನ ಮಾರ್ಗಗಳನ್ನು ಯಾವಾಗಲೂ ಹುಡುಕುತ್ತಿರುತ್ತಾರೆ.

ಶ್ರೀವತ್ಸರವರು ಕರ್ನಾಟಕದಲ್ಲಿ ಕೃಷಿ ಪ್ರವಾಸೋದ್ಯಮದ ರುವಾರಿಗಳಲ್ಲಿ ಒಬ್ಬರಾಗಿ ತಮ್ಮ ಕೃಷಿಭೂಮಿಯಲ್ಲಿ ಜವಾಬ್ದಾರಿ ಯುತ ಕೃಷಿ-ಪ್ರವಾಸೋದ್ಯಮ ಅನುಭವಗಳನ್ನು ಅತಿಥಿಗಳು ಹಾಗು ವಿದ್ಯಾರ್ಥಿಗಳಿಗೆ ಒಂದೂವರೆ ದಶಕಕ್ಕೂ ಹೆಚ್ಚಿನ ಕಾಲದಿಂದ ನೀಡುತ್ತಿದ್ದಾರೆ.

*ವಿಷಮುಕ್ತ ಅನ್ನದ ಭಟ್ಟಲು ಆಗಬೇಕೆಂಬ ಒತ್ತಾಸೆಯಿಂದ ನಮ್ಮ ಬಳಗ ಅನೇಕ ಜನಶಿಕ್ಷಣದೊಂದಿಗೆ ನೇರ ಕರ್ನಾಟಕದ ವಿವಿಧ ಸಾವಯವ ರೈತರ ಉತ್ಪನ್ನಗಳನ್ನು ಮಾರಾಟ ಮಾಡುವ ಸಾವಯವ ಸಂತೆ ಯನ್ನು 2025 ಫೆಬ್ರವರಿ ತಿಂಗಳಿ ನಿಂದ ನಿರಂತರ ಪ್ರತೀ ತಿಂಗಳ ಮೊದಲ ಶನಿವಾರ ಮತ್ತು ಭಾನುವಾರ ಮಂಗಳೂರಿನ ನಂತೂರು ಶ್ರೀಭಾರತೀ ಸಮೂಹ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ನಡೆಯಲಿದೆ ಎಂದವರು ತಿಳಿಸಿದ್ದಾರೆ.

ಬಳಗದ ನಿಕಟ ಪೂರ್ವ ಅಧ್ಯಕ್ಷ ಅಡ್ಡೂರು ಕೃಷ್ಣರಾವ್ ,ಕಾರ್ಯ ದರ್ಶಿ ರತ್ನಾಕರ , ಶರತ್ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News