ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ಒಂದೇ ದಿನದಲ್ಲಿ ಗರಿಷ್ಠ ಪ್ರಯಾಣಿಕರನ್ನು ನಿರ್ವಹಿಸಿದ ದಾಖಲೆ

Update: 2025-01-13 17:42 GMT

ಮಂಗಳೂರು, ಜ.13: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವು ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ದಾಖಲೆಯನ್ನು ಉತ್ತಮಗೊಳಿಸಿದೆ.

ವಿಮಾನ ನಿಲ್ದಾಣವು ಜನವರಿ 12ರಂದು 7,710 ಪ್ರಯಾಣಿಕರ ಆಗಮನ ಮತ್ತು ನಿರ್ಗಮನವನ್ನು ನಿರ್ವಹಿಸಿದೆ. ಇದು ವಿಮಾನ ನಿಲ್ದಾಣದ ವಾಣಿಜ್ಯ ಕಾರ್ಯಾಚರಣೆ ದಿನಾಂಕ (ಸಿಒಡಿ) ಅ.31,2020 ರ ನಂತರದ ಅತ್ಯಧಿಕ ಪ್ರಯಾಣಿಕರ ನಿರ್ವಹಣೆ ಆಗಿದೆ.

ವಿಮಾನ ನಿರ್ವಹಿಸಿದ ಪ್ರಯಾಣಿಕರಲ್ಲಿ 7,613 ವಯಸ್ಕರು ಮತ್ತು 97 ಶಿಶುಗಳು ಸೇರಿದ್ದಾರೆ. ಈ ಹಿಂದೆ ವಿಮಾನ ನಿಲ್ದಾಣವು ಜ. 4, 2025 ರಂದು ಗರಿಷ್ಠ 7,613 ಪ್ರಯಾಣಿಕರನ್ನು ನಿರ್ವಹಿಸಿತ್ತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News