ಸದ್ಭಾವನಾ ವೇದಿಕೆಯಿಂದ ದೀಪಾವಳಿ, ಈದ್, ಕ್ರಿಸ್ಮಸ್ ಸೌಹಾರ್ದ ಕೂಟ
Update: 2025-01-13 17:24 GMT
ಮಂಗಳೂರು, ಜ.13: ಸದ್ಭಾವನಾ ವೇದಿಕೆ ಜಪ್ಪು ವರ್ತುಲ ಇದರ ವತಿಯಿಂದ 10ನೆ ವರ್ಷದ ದೀಪಾವಳಿ, ಈದ್, ಕ್ರಿಸ್ಮಸ್ ಸೌಹಾರ್ದ ಕೂಟವು ರವಿವಾರ ಜಪ್ಪು ಮೋರ್ಗನ್‌ಗೇಟ್ ಕಾಸಿಯಾ ಚರ್ಚ್ ಹಾಲ್‌ನಲ್ಲಿ ನಡೆಯಿತು.
ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು, ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾ. ಆಲ್ವಿನ್ ಡಿಸೋಜ, ಬರಕಾ ಇಂಟರ್‌ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಶರ್ಫುದ್ದೀನ್ ಬಿ.ಎಸ್. ಸೌಹಾರ್ದ ಸಂದೇಶ ಸಾರಿದರು.
ವೇದಿಕೆಯ ಅಧ್ಯಕ್ಷ ದಿವಾನ್ ಕೇಶವ್ ಭಟ್ ಸ್ವಾಗತಿಸಿದರು. ಉಪಾಧ್ಯಕ್ಷ ಜೀಸನ್ ಪೀಟರ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸಾಲೆಹ್ ಮುಹಮ್ಮದ್ ವಂದಿಸಿದರು. ಉಪಾಧ್ಯಕ್ಷ ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.