ಬಂಟ್ವಾಳ : ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ - ರಕ್ಷಕ ಸಂಘದ ಸಭೆ
ಬಂಟ್ವಾಳ : ಇಲ್ಲಿನ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ - ರಕ್ಷಕ ಸಂಘದ ಸಭೆಯು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಿಯಾಝ್ ಹುಸೈನ್ ನೇತೃತ್ವದಲ್ಲಿ ಜರಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಸಭಾ ಸದಸ್ಯ ಎಸ್.ಎಲ್. ಭೋಜೇ ಗೌಡ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿಯೇ ಸಾಮರಸ್ಯವನ್ನು ಮೈಗೂಡಿಸಿಕೊಳ್ಳಬೇಕು, ಸಂಸ್ಕಾರದ ಜೊತೆಗೆ ಜ್ಞಾನವು ದೊರೆತರೆ ಉತ್ತಮ ವಿದ್ಯಾರ್ಥಿಗಳಾಗಲು ಸಾಧ್ಯ, ಪೋಷಕರು ಮಕ್ಕಳ ಜವಾಬ್ದಾರಿಗಳನ್ನು ಅವರಿಗೆ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.
ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಶಾಲಾ ಸಂಚಾಲಕ ಮೊಹಮ್ಮದ್ ಸಗೀರ್, ನ್ಯಾಯ ವಾದಿ ಉಮೇಶ್, ಬಂಟ್ವಾಳ ಜುಮಾ ಮಸೀದಿಯ ಅಧ್ಯಕ್ಷ ಅಹ್ಮದ್ ಶಾಫಿ, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಹನೀಫ್, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಉಬೈದುಲ್ಲಾ, ಹಾರೂನ್ ರಶೀದ್, ಸನಾವುಲ್ಲ, ರಿಯಾಝ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ಮುಖ್ಯ ಅತಿಥಿಗಳಾದ ಭೋಜೇ ಗೌಡ, ಶಿಕ್ಷಣ ತರಬೇತುದಾರ ರಫೀಕ್ ಮಾಸ್ಟರ್, ಶಾಲಾ ಮುಖ್ಯ ಶಿಕ್ಷಕಿ ಯಾಗಿ ಕರ್ತವ್ಯ ನಿರ್ವಹಿಸಿದ್ದ ಮೆಟಿಲ್ಡಾ ಡಿ ಕೋಸ್ಟ ಅವರಿಗೆ ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. 2022-23 ನೇ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 12 ವಿದ್ಯಾರ್ಥಿ ಗಳನ್ನು ಅಭಿನಂದಿಸಲಾಯಿತು.
ಶಾಲಾ ಮುಖ್ಯಶಿಕ್ಷಕ ಇಬ್ರಾಹಿಂ ಸಲೀಂ ಪಿ ಶಾಲೆಯ ನಿಯಮ ನಿಬಂಧನೆಗಳ ಬಗ್ಗೆ ಮಾತನಾಡಿದರು. ಮದರಸ ವಿಭಾಗದ ಮುಖ್ಯ ಶಿಕ್ಷಕ ಅಬ್ದುಲ್ ಮಜೀದ್ ಫೈಝಿ ವಿದ್ಯಾರ್ಥಿಗಳು ಪಾಲಿಸಬೇಕಾದ ಶಿಸ್ತಿನ ಬಗ್ಗೆ ವಿವರಿಸಿದರು.
ಶಿಕ್ಷಕ - ರಕ್ಷಕರ ಸಂಘದ ಕಾರ್ಯದರ್ಶಿ ಅಸ್ಮಾ ಜಿ. ವರದಿ ವಾಚಿಸಿದರು. ಆಡಳಿತಾಧಿಕಾರಿ ಅಬ್ದುಲ್ ಸಮದ್ ಹುದವಿ ಸ್ವಾಗತಿಸಿ, ಸಹ ಮುಖ್ಯ ಶಿಕ್ಷಕಿ ರಚನ ವಂದಿಸಿದರು. ಸಹ ಶಿಕ್ಷಕಿಯರಾದ ನಿಶ್ಮಿತಾ, ಪ್ರಿಯಾ ಕಾರ್ಯಕ್ರಮ ನಿರೂಪಿಸಿ ದರು. ವಿದ್ಯಾರ್ಥಿ ಮಹದಿ ಹಸನ್ ಕಿರಾಅತ್ ಪಠಿಸಿದರು.