ಬೆಳ್ತಂಗಡಿ: ಸೆಪ್ಟೆಂಬರ್ 23 ರಿಂದ ‘ಯಕ್ಷಾವತರಣ – 5’ ನೆಡ್ಲೆ ನರಸಿಂಹ ಭಟ್ ಸಂಸ್ಮರಣೆ ಸಪ್ತಾಹ

Update: 2024-09-22 08:03 GMT

ಬೆಳ್ತಂಗಡಿ: ಇಲ್ಲಿನ ಲೈಲಾದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಭವನದಲ್ಲಿ ಸೆಪ್ಟೆಂಬರ್ 23 ರಿಂದ 30ವರೆಗೆ ಯಕ್ಷಗಾನ ಮಹೋಪಾಧ್ಯಾಯ ನೆಡ್ಲೆ ನರಸಿಂಹ ಭಟ್ ಅವರ ಸಂಸ್ಮರಣೆಗಾಗಿ ‘ಯಕ್ಷಾವತರಣ-5’ ಎಂಬ ಯಕ್ಷ ಸಾಂಗತ್ಯ ತಾಳಮದ್ದಳೆ ಸಪ್ತಾಹ ಹಾಗು ಯಶೋ ಯಕ್ಷ ನಮನ ಸಾಂಸ್ಕೃತಿಕ ಕಾರ್ಯಕ್ರಮ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಉಜಿರೆ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.), ಬೆಳ್ತಂಗಡಿ, ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಸಹಯೋಗದಲ್ಲಿ ಆಯೋಜಿಸಲಾಗಿದೆ.

‘ಯಕ್ಷಾವತರಣ-5’ ಉದ್ಘಾಟನೆಯನ್ನು ಉದ್ಯಮಿ ನೆಡ್ಳೆ ರಾಮ ಭಟ್ ಮಂಗಳೂರು ನೆರವೇರಿಸಲಿದ್ದಾರೆ. ಕುರಿಯ ವಿಠಲ ಶಾಸ್ತ್ರಿಪ್ರತಿಭಾ ಪುರಸ್ಕಾರ ಜೀ ವಾಹಿನಿಯ ಡ್ರಾಮಾ ಜೂನಿಯರ್ ವಿಜೇತೆ ರಿಷಿಕಾ ಕುಂದೇಶ್ವರ. ಅವರಿಗೆ ನೀಡಲಾಗುವುದು.

ಸೆಪ್ಟೆಂಬರ್ 23 ‘ಭೀಷ್ಮ ಪರ್ವ’, ಸೆಪ್ಟೆಂಬರ್ 24 ‘ಇಂದ್ರತಂತ್ರ - ಪ್ರಹ್ಲಾದಶಾಪ’, ಸೆಪ್ಟೆಂಬರ್ 25 ‘ಶಲ್ಯ ಸಾರಥ್ಯ’, ಸೆಪ್ಟೆಂಬರ್ 26 ‘ವಾಮನ ಚರಿತ್ರೆ’, ಸೆಪ್ಟೆಂಬರ್ 27 ‘ಕರ್ಣಭೇದನ’, ಸೆಪ್ಟೆಂಬರ್ 28 ‘ಅಗ್ನಿಪರೀಕ್ಷೆ - ನಿಜಪಟ್ಟಾಭಿಷೇಕ’, ಸೆಪ್ಟೆಂಬರ್ 29 ‘ಗುರುದಕ್ಷಿಣೆ’, ಸೆಪ್ಟೆಂಬರ್ 30 ‘ಯಶೋ’ ಯಕ್ಷನಮನ - ಗಾನ-ನೃತ್ಯ-ಚಿತ್ರ ಕಾರ್ಯಕ್ರಮ ಆಯೋಜಿಸಲಾಗಿದೆ.

ಹಿರಿಯ ಯಕ್ಷಗಾನ ಕಲಾವಿದರು, ಹಿಮ್ಮೇಳ ಮತ್ತು ಮುಮ್ಮೇಳ ತಂಡಗಳು ಈ ಕಲಾವೈಭವದಲ್ಲಿ ಭಾಗವಹಿಸಲಿದ್ದಾರೆ.

ಪ್ರತಿದಿನ ಸಂಜೆ 4.45 ರಿಂದ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದೆ, ಎಂದು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಕುಮಾರಸ್ವಾಮಿ ಕನ್ಯಾನ, ಸಂಚಾಲಕ ಉಜಿರೆ ಅಶೋಕ ಭಟ್, ಸ್ಥಾನಿಕ ಸಭಾ-ಅಧ್ಯಕ್ಷ ಶಿವಾನಂದ ರಾವ್, ಕಕ್ಕನೇಜಿ, ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಪೂರನ್ ವರ್ಮ ಉಜಿರೆ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News