ಕ್ರೆಡಿಟ್ ಕಾರ್ಡ್‌ನಿಂದ ಹಣ ವರ್ಗಾಯಿಸಿ ವಂಚನೆ: ಪ್ರಕರಣ ದಾಖಲು
ಮಂಗಳೂರು, ಅ.2: ಕ್ರೆಡಿಟ್ ಕಾರ್ಡ್‌ನಿಂದ ಅನಧಿಕೃತವಾಗಿ 1.55 ಲ.ರೂ.ಗಳನ್ನು ವರ್ಗಾಯಿಸಿ ವಂಚಿಸಿರುವ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
ತಾನು ಐಸಿಐಸಿಐ ಕ್ರೆಡಿಟ್‌ಕಾರ್ಡ್ ಹೊಂದಿದ್ದು, ತನ್ನ ಮೊಬೈಲ್‌ಗೆ ಸೆ.10ರಂದು ಹಲವು ಒಟಿಪಿಗಳ ಸಂದೇಶ ಬಂದಿದ್ದವು. ಅಲ್ಲದೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಆದರೆ ತಾನು ಯಾವುದೇ ಕರೆ ಸ್ವೀಕರಿಸದೆ ತನ್ನ ಮೊಬೈಲ್‌ನಿಂದ ಐಸಿಐಸಿಐ ಆ್ಯಪ್ ತೆರೆದು ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿದ್ದೆ. ಅಲ್ಲದೆ ಐಸಿಐಸಿಐ ಕ್ರೆಡಿಟ್ ಕಾರ್ಡ್‌ನ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಕಾರ್ಡ್ ಬ್ಲಾಕ್ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡಿದ್ದೆ. ಕಾರ್ಡ್ ಬ್ಲಾಕ್ ಆಗಿರುವ ಬಗ್ಗೆ ಇಮೇಲ್ ಕೂಡ ಬಂದಿತ್ತು. ಮರುದಿನ ರಾತ್ರಿ ಆ್ಯಪ್ ಮೂಲಕ ಕ್ರೆಡಿಟ್ ಕಾರ್ಡ್‌ನ ಸ್ಟೇಟಸ್ ನೋಡಿದಾಗ 1,60,401 ರೂ. ಔಟ್‌ಸ್ಟ್ಯಾಂಡಿಂಗ್ ಇರುವುದಾಗಿ ತೋರಿಸಿತು. ಕೂಡಲೇ ಕಸ್ಟಮರ್ ಕೇರ್‌ಗೆ ಕರೆ ಮಾಡಿ ವಿಚಾರಿಸಿದಾಗ ಯಾರೋ ಅಪರಿಚಿತರು ಆನ್‌ಲೈನ್ ಮೂಲಕ ಮೋಸದಿಂದ 1.55 ಲ.ರೂ.ಗಳನ್ನು ಅನಧಿಕೃತವಾಗಿ ವರ್ಗಾವಣೆ ಮಾಡಿದ್ದಾರೆ ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.