ಕೆ. ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ: ಬಯೋಕೆಮಿಸ್ಟ್ರಿ ವಿಭಾಗದ ಸಂಶೋಧಕಿಯರಿಗೆ ಪಿ.ಎಚ್.ಡಿ ಪದವಿ
ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯದ ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಬಯೋಕೆಮಿಸ್ಟ್ರಿ ವಿಭಾಗದ ಐದು ಮಂದಿ ಸಂಶೋಧಕಿಯರಿಗೆ ಸಂಸ್ಥೆಯ 14ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ) ಪದವಿ ಪ್ರದಾನ ಮಾಡಲಾಗಿದೆ.
ಅಶ್ವಿನಿ. ಕೆ ಯವರು ಮಂಡಿಸಿದ “ಐಡೆಂಟಿಫಿಕೇಷನ್ ಆಫ್ ಬಯೋಮಾರ್ಕರ್ ಆಂಡ್ ಥೆರಪ್ಯೂಟಿಕ್ ಟಾರ್ಗೆಟ್ ಫಾರ್ ಗ್ಲಿಯೋಬ್ಲಾಸ್ಟೊಮಾ” ಎಂಬ ಮಹಾಪ್ರಬಂಧಕ್ಕೆ (ಪಿ.ಎಚ್.ಡಿ) ಪದವಿ ಲಭಿಸಿದೆ. ಡಾ. ಅಶ್ವಿನಿ ಕೆ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಯಾಗಿದ್ದರು. ಇವರು , ಕೆ. ಶ್ರೀಕಾಂತ ಭಟ್ ಮತ್ತು ಆಶಾ ಎಸ್ .ಭಟ್ ಅವರ ಪುತ್ರಿ ಮತ್ತು ಸಿಎ ಅನಂತ ಭಟ್ ಕೆ ಅವರ ಧರ್ಮಪತ್ನಿ.
ರೂಪಶ್ರೀಯವರು ಮಂಡಿಸಿದ “ಕ್ರಾಸ್ಸ್ಟಾಕ್ ಬಿಟ್ವೀನ್ ಮೀಡಿಯಂ ಚೈನ್ ಫ್ಯಾಟಿ ಆಸಿಡ್ಸ ಆಂಡ್ ಒಂಕೊಜೆನಿಕ್ ಸಿಗ್ನಲ್ ಟ್ರಾನ್ಸ್ಡಕ್ಷನ್ ಪಾತ್ವೇ ಇನ್ ಬ್ರೆಸ್ಟ್ ಕ್ಯಾನ್ಸರ್” ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಲಭಿಸಿದೆ. ಡಾ. ರೂಪಶ್ರೀಯವರು, ದಿ. ಪದ್ಮನಾಭ ಪೂಜಾರಿ ಮತ್ತು ದಿ. ಪುಷ್ಪ ದಂಪತಿಯ ಪುತ್ರಿ ಹಾಗು ಸನತ್ ಅವರ ಧರ್ಮಪತ್ನಿ. ಇವರು ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಯಾಗಿದ್ದರು.
ಸುಹಾಸಿನಿಯವರು ಮಂಡಿಸಿದ “ಎಕ್ಸೋಸೋಮಲ್ ಮಾರ್ಕರ್ ಸಿಡಿ9 ಇನ್ ಪ್ರೋಗ್ರೆಷನ್ ಆಫ್ ಟಂಗ್ ಕ್ಯಾನ್ಸರ್ ಆಂಡ್ ಇಟ್ಸ್ ಇಂಪ್ಲಿಕೇಷನ್ ಅಸ್ ಪ್ರೋಗ್ನೋಸ್ಟಿಕೇಟರ್ ಆಂಡ್ ಥೇರಾಪೆಟಿಕ್ ಟಾರ್ಗೆಟ್” ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಲಭಿಸಿದೆ. ಡಾ. ಸುಹಾಸಿನಿಯವರು ಚಿತ್ರಭಾನು ಮತ್ತು ವಿದ್ಯಾ ದಂಪತಿಯ ಪುತ್ರಿ ಹಾಗು ನಂದಕಿಶೋರ್ ಅವರ ಧರ್ಮಪತ್ನಿ. ಇವರು ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಯಾಗಿದ್ದರು.
ರಂಜಿತಾ ಕೆ ಯವರು ಮಂಡಿಸಿದ “ಫ್ಯಾಟಿ ಆಸಿಡ್ ಮೀಡಿಯೇಟೆಡ್ ರೀಪ್ರೋಗ್ರಾಮಿಂಗ್ ಆಫ್ ಫ್ಯಾಟಿ ಆಸಿಡ್ ಟ್ರಾನ್ಸ್ಪೋರ್ಟರ್ಸ್ ಇನ್ ಬ್ರೆಸ್ಟ್ ಕ್ಯಾನ್ಸರ್” ಎಂಬ ಮಹಾಪ್ರಬಂಧಕ್ಕ ಪಿ.ಎಚ್.ಡಿ ಪದವಿ ಲಭಿಸಿದೆ. ಡಾ. ರಂಜಿತಾ ಕೆ., ಇವರು ಮೀನಾಕ್ಷಿ ಹಾಗು ಭಾಸ್ಕರ ಆಚಾರ್ಯ ದಂಪತಿಯ ಪುತ್ರಿ. ಇವರು ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಯಾಗಿದ್ದರು.
ಫ್ಲಾಮಾ ಮೊಂತೆರೋ ಅವರು ಮಂಡಿಸಿದ “ಅನ್‌ರಾವೆಲಿಂಗ್ ದಿ ಪೈರುವೇಟ್ ಕೈನೇಸ್ ಎಂ 2 ಮೀಡಿಯೇಟೆಡ್ ಮೋಡ್ಯುಲೇಶನ್ ಆಫ್ ವಾರ್ಬರ್ಗ್ ಇಫೆಕ್ಟ್ ಬೈ ಸಿಟ್ರಸ್ ಮ್ಯಾಕ್ಸಿಮಾ ಪೀಲ್ ಎಕ್ಸ್ಟ್ರ್ಯಾಕ್ಟ್ ಇನ್ ಬ್ರೆಸ್ಟ್ ಕ್ಯಾನ್ಸರ್” ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಲಭಿಸಿದೆ. ಡಾ. ಫ್ಲಾಮಾ ಮೊಂತೆರೋ ಮೇರಿ ಮತ್ತು ದಿ. ಫೆಲಿಕ್ಸ್ ಮೊಂತೆರೋ ದಂಪತಿಯ ಪುತ್ರಿ ಹಾಗು ಜಾನ್ ಮಸ್ಕರೇನ್ಹಸ್ ಅವರ ಧರ್ಮಪತ್ನಿಯಾಗಿದ್ದಾರೆ. ಇವರು ಕೆ.ಎಂ.ಸಿ ಮಣಿಪಾಲ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿನಿ.
ಈ ಐದು ಮಂದಿ ಸಂಶೋಧಕಿಯರ ಮಹತ್ವದ ಸಂಶೋಧನಾ ಪ್ರಬಂಧಗಳನ್ನು ಡಾ. ಸುಚೇತಾ ಕುಮಾರಿ ನಳಿಲು, (ಪ್ರೊಫೆಸರ್, ಬಯೋಕೆಮಿಸ್ಟ್ರಿ ವಿಭಾಗ, ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ, ನಿಟ್ಟೆ ವಿಶ್ವವಿದ್ಯಾಲಯ) ಅವರ ಮಾರ್ಗದರ್ಶನದಲ್ಲಿ ಮಂಡಿಸಲಾಗಿದೆ.