ದೇರಳಕಟ್ಟೆಯಲ್ಲಿ ಯುನಿವೆಫ್ ಸೀರತ್ ಸಮಾವೇಶ

Update: 2023-10-30 17:16 GMT

ದೇರಳಕಟ್ಟೆ: 'ಮಾನವ ಧರ್ಮ, ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್ (ಸ)’ ಎಂಬ ಕೇಂದ್ರೀಯ ವಿಷಯದಲ್ಲಿ ಯುನಿವೆಫ್ ಕರ್ನಾಟಕ ಇದರ ವತಿಯಿಂದ 2023ರ ಅಕ್ಟೋಬರ್ 6 ರಿಂದ ಡಿ.22ರವರೆಗೆ ದ.ಕ.ಜಿಲ್ಲಾದ್ಯಂತ ಹಮ್ಮಿಕೊಂಡಿ ರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಎಂಬ ಪ್ರವಾದಿ ಸಂದೇಶ ಅಭಿಯಾನದ ಪ್ರಯುಕ್ತ ದೇರಳಕಟ್ಟೆ ಸಿಟಿ ಗ್ರೌಂಡ್ ನಲ್ಲಿ ಸೀರತ್ ಸಮಾವೇಶ ಜರಗಿತು.

ಈ ಕಾರ್ಯಕ್ರಮದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು "ಪ್ರವಾದಿ ಹಃ ಮುಹಮ್ಮದ್ (ಸ) ರ ಮಾದರಿ ಜೀವನ" ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಿ "ಪ್ರವಾದಿ ಪ್ರೇಮ ಕೇವಲ ಒಂದು ದಿನಕ್ಕೋ ಅಥವಾ ಒಂದು ತಿಂಗಳಿಗೋ ಸೀಮಿತವಾಗಿರದೆ ಜೀವನ ಪರ್ಯಂತ ಅವರ ಅನುಸರಣೆಯ ಮೂಲಕ ಆ ಪ್ರೇಮದ ಅಭಿವ್ಯಕ್ತಿ ಆಗಬೇಕು. ಮರಣಾಸನ್ನ ಸ್ಥಿತಿಯಲ್ಲೂ ತನ್ನ ಜನಾಂಗಕ್ಕಾಗಿ ಪ್ರಾರ್ಥಿಸಿದ, ತನಗಾಗಿ ಏನನ್ನೂ ಬಯಸದೆ ಸದಾ ತನ್ನ ಅನುಯಾಯಿಗಳ ಪರಲೋಕ ಜೀವನದ ಬಗ್ಗೆ ಕಾಳಜಿ ಹೊಂದಿದ ಆ ಮಹಾನ್ ಚೇತನದ ಸಂದೇಶ ಇಹ ಪರ ವಿಜಯಕ್ಕೆ ಹೇತುವಾಗಿದೆ." ಎಂದು ಹೇಳಿದರು.

ಅಭಿಯಾನದ ಸಂಚಾಲಕ ಸೈಫುದ್ದೀನ್ ಕುದ್ರೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮರ್ ಮುಖ್ತಾರ್ ಕಿರಾಅತ್ ಪಠಿಸಿದರು. ಮುಹಮ್ಮದ್ ಆಸಿಫ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಯುನಿವೆಫ್ ದಕ್ಷಿಣ ವಲಯ ಸಂಚಾಲಕ ಅಡ್ವೊಕೇಟ್ ಸಿರಾಜುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News