ದ.ಕ. ಜಿಲ್ಲೆಯ ಅಲ್ಲಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Update: 2024-08-15 15:30 GMT

ಮಂಗಳೂರು: ದ.ಕ. ಜಿಲ್ಲೆಯ ಹಲವು ಕಡೆಗಳಲ್ಲಿ ಇಂದು ಸಂಭ್ರಮದ ಸ್ವತಂತ್ರೋತ್ಸವವನ್ನು ಆಚರಿಸಲಾಯಿತು.

ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ವತಿಯಿಂದ ಜಲಾಲ್ ಮಸ್ತಾನ್ ಮುಹಮ್ಮದ್ ಮೌಲಾ ಹಿಫ್ಲುಲ್ ಕುರಾನ್ ಕಾಲೇಜಿನ ಸಭಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಖತೀಬ್ ಅಬುಲ್ ಅಕ್ರಮ್ ಮುಹಮ್ಮದ್ ಬಾಖವಿ ದುಆಗೈದರು. ಮಸೀದಿಯ ಉಪಾಧ್ಯಕ್ಷ ಅಶ್ರಫ್ ಕೆ.ಇ., ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಮುಅಝ್ಝಿನ್ ಅಬ್ದುಲ್ ಹಮೀದ್ ಮುಸ್ಲಿಯಾರ್, ಧರ್ಮಗುರುಗಳಾದ ಮುಹಮ್ಮದ್ ಜುನೈದ್ ಅಝ್ಹರಿ, ಎಂಡಿ ಅಜರುದ್ದೀನ್ ಅನ್ಸಾರಿ, ಎಸ್ಕೆಎಸೆಸ್ಸೆಫ್ ಬಂದರ್ ಶಾಖೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಮುಸ್ಲಿಯಾರ್, ಹಮೀದ್ ಕಚ್ಮಿನ್, ಝಾಕಿರ್ ಕೋಝಿಕಾನ ಮತ್ತಿತರರು ಉಪಸ್ಥಿತರಿದ್ದರು.

ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಮುಹಮ್ಮದ್ ಮಸೂದ್‌ರ ನಿರ್ದೇಶನದಂತೆ ಕಮಿಟಿಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕೆ. ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಸಿ.ಎಂ. ಹನೀಫ್, ಹಾಜಿ ರಿಯಾಝುದ್ದೀನ್, ಎಂ.ಎ. ಅಶ್ರಫ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅದ್ದು ಹಾಜಿ, ಮುಹಮ್ಮದ್ ಸಲೀಂ ಮನ್ನತ್, ಝಾಕೀರ್ ಕೋಝಿಕಾನ್, ಹಾಜಿ ಕಂದಕ್ ಅಬ್ದುಲ್ ಖಾದರ್, ಅಬ್ದುಲ್ ಹಮೀದ್ ಕಚ್ಚಿಮನ್, ಹಸೀಬುರ‌್ರಹ್ಮಾನ್ ಉಪಸ್ಥಿತರಿದ್ದರು.

ಕೊಣಾಜೆ ಅಡ್ಕರೆಪಡ್ಪುಜಮೀಯ್ಯತುಲ್ ಫಲಾಹ್ ಗ್ರೀನ್ ವೀವ್ ವಿದ್ಯಾಸಂಸ್ಥೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ದ.ಕ ಹಾಗೂ ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ಮುಖ್ಯ ಕಾರ್ಯದರ್ಶಿ ಶೇಕ್ ಅಬ್ದುಲ್ ಗಫೂರ್ ಧ್ವಜಾರೋಹಣ ಗೈದರು. ಜಮೀಯ್ಯತುಲ್ ಫಲಾಹ್ ಆಡಳಿತಾಧಿಕಾರಿ ಜಮಾಲುದ್ದೀನ್ ಮಾತನಾಡಿದರು. ಪ್ರಾಥಮಿಕ ಮುಖ್ಯ ಶಿಕ್ಷಕಿ ಎವ್ಲಿನ್ ಐಮನ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕಾರ್ಪೊರೇಶನ್ ಘಟಕದ ಮುಖ್ಯ ಕಾರ್ಯದರ್ಶಿ ಎಮ್.ಎಸ್. ಸೈಫುಲ್ಲಾ, ಮುಹಿಯ್ಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಜಾಫರ್, ಗ್ರಾಪಂ ಸದಸ್ಯ ಹೈದರ್, ಎಸ್‌ಬಿಸಿ ಅಧ್ಯಕ್ಷ ಹಸೈನಾರ್ ಎ.ಬಿ., ಉಪಾಧ್ಯಕ್ಷೆ ಮಾಲತಿ, ನಿಕಟಪೂರ್ವ ಅಧ್ಯಕ್ಷ ಅಬೂಬಕ್ಕರ್ ಮುಹಮ್ಮದ್, ಅಲ್ ಇಹ್ಸಾನ್ ಸಂಸ್ಥೆಯ ಅಧ್ಯಕ್ಷ ಸಿದ್ದೀಕ್, ಕಾರ್ಯದರ್ಶಿ ನಿಯಾಝ್, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ನಮಿತಾ ಬಿ.ಎನ್. ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲ ಅಬೂಬಕ್ಕರ್ ಸ್ವಾಗತಿಸಿದರು. ಸಹ ಶಿಕ್ಷಕ ತಿಪ್ಪೋಜಿ ಎಂ. ವಂದಿಸಿದರು. ಸಹ ಶಿಕ್ಷಕಿ ರೆನಿಟಾ ಕಾರ್ಯಕ್ರಮ ನಿರೂಪಿಸಿದರು.

ಗೌಸಿಯಾ ಜುಮಾ ಮಸೀದಿ ಮೋಂಟುಗೋಳಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಗಡಿಯಾರ ಸಮೂಹದ ಕಂಪನಿಯ ನಿರ್ದೇಶಕ ಇಬ್ರಾಹಿಂ ಗಡಿಯಾರ್ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು. ಮುಖ್ಯ ಅತಿಥಿಯಾಗಿ ಅಹ್ಮದ್ ಬಾವ ಪಡೀಲ್ ಭಾಗವಹಿಸಿದ್ದರು. ಜಮಾಅತ್ ಅಧ್ಯಕ್ಷ ಸುಲೈಮಾನ್ ಅಧ್ಯಕ್ಷತೆ ವಹಿಸಿದ್ದರು. ಸದರ್ ಉಸ್ತಾದ್ ರಫೀಕ್ ಸಅದಿ ಕಾರ್ಯಕ್ರಮ ನಿರೂಪಿಸಿದರು.

ಅಲ್ ಮದ್ರಸತುಲ್ ಕುತುಬಿಯ್ಯಾ ಕಿನ್ಯ  ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕಿನ್ಯ ಮುದರ್ರಿಸ್ ಅಬ್ದುಲ್ ಮಜೀದ್ ದಾರಿಮಿ ದುಆಗೈದರು. ಕಿನ್ಯ ಕೇಂದ್ರ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಧ್ವಜಾರೋಹಣಗೈದರು. ಸದರ್ ಉಸ್ತಾದ್ ಉಮರುಲ್ ಫಾರೂಕ್ ದಾರಿಮಿ ಸಂದೇಶ ನೀಡಿದರು. ಎಸ್‌ಬಿವಿ ಕಾರ್ಯದರ್ಶಿ ಸಿಲ್ಮಿ ಪ್ರತಿಜ್ಞೆ ಬೋಧಿಸಿದರು.

ಜಮಾಅತ್ ಜೊತೆ ಕಾರ್ಯದರ್ಶಿ ಹಮೀದ್ ಪಾಲಡಿ, ಕಿನ್ಯ ಗ್ರಾಪಂ ಉಪಾಧ್ಯಕ್ಷ ಫಾರೂಕ್ ಕಿನ್ಯ, ಶುಭ ಹಾರೈಸಿದರು. ಎಸ್‌ಬಿವಿ ವಿದ್ಯಾರ್ಥಿಗಳು ರಾಷ್ಟ್ರ ಗೀತೆ ಮತ್ತು ದೇಶ ಭಕ್ತಿಗೀತೆ ಹಾಡಿದರು. ಮಸೀದಿಯ ಪ್ರದಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ, ಕೋಶಾಧಿಕಾರಿ ಬಾವು ಹಾಜಿ, ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಸಾಗ್, ಕುತುಬಿಯ್ಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಶ್ರಫ್ ಚಾಯರ ವಲಚಿಲ್, ಕಾರ್ಯದರ್ಶಿ ಆರಿಫ್, ಮದ್ರಸದ ಶಿಕ್ಷಕರಾದ ಅಲಿ ಹೈದರ್ ಫೈಝಿ, ಹನೀಫ್ ದಾರಿಮಿ, ಅಶ್ರಫ್ ಅರ್ಷದಿ, ಅಬ್ದುಲ್ ಖಾದರ್ ಮುರ್ಶಿದಿ, ಹಂಝ ಹನೀಫಿ, ಸಿಮಾಕ್ ಫೈಝಿ, ಇಕ್ಬಾಲ್ ಮುಸ್ಲಿಯಾರ್ ಭಾಗವಹಿಸಿದ್ದರು. ಸ್ವಾತಂತ್ಯ ಪ್ರಯುಕ್ತ ನಡೆಸಿದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಸ್‌ಬಿವಿ ಅಧ್ಯಕ್ಷ ಶೇಖ್ ಅಝ್ಮಿ ವಂದಿಸಿದರು.

ಹಳೆಕೋಟೆ ಸೈಯದ್ ಮದನಿ ವಿದ್ಯಾಸಂಸ್ಥೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಫಾರೂಕ್ ಪಿಎಚ್ ಧ್ವಜಾರೋಹಣಗೈದರು. ಈ ಸಂದರ್ಭ ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ, ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್‌ವೇ, ಹಾಜಿ ಮುಹಮ್ಮದ್ ತ್ವಾಹ, ಯುಎನ್ ಇಬ್ರಾಹಿಂ, ಎಂಎಚ್ ಇಬ್ರಾಹಿಂ, ಅಲ್ತಾಫ್ ಅಹ್ಮದ್, ಮುಹಮ್ಮದ್ ಹಳೆಕೋಟೆ, ಅಶ್ರಫ್ ಹಳೆಕೋಟೆ, ಹಮೀದ ಹಳೆಕೋಟೆ, ಹಾಜಿ ಯುಕೆ ಬಾವ, ಹಾಜಿ ಜೈನುದ್ದೀನ್, ಜಲೀಲ್ ಮುಸ್ಲಿಯಾರ್, ಕರೀಮ್ ಎಚ್. ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಕೆಎಂಕೆ ಮಂಜನಾಡಿ ಸ್ವಾಗತಿಸಿದರು.

ಬಬ್ಬುಕಟ್ಟೆ ಆಕ್ಸೀಜನ್ ಲ್ಯಾಂಡ್ ಮಾರ್ಕ್ ವಸತಿ ಸಮುಚ್ಚಯ  ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಸತಿ ಸಮು ಚ್ಚಯದ ಆಡಳಿತ ಕಮಿಟಿಯ ಮಾಜಿ ಅಧ್ಯಕ್ಷ ಅಶ್ರಫ್ ಧ್ವಜಾರೋಹಣಗೈದರು. ಮನ್ಸೂರ್ ಅಹ್ಮದ್ ಟಿ.ಎಸ್ ಸ್ವಾಗತಿಸಿ, ಶುಭ ಹಾರೈಸಿದರು. ವಸತಿ ಸಮುಚ್ಚಯದ ಆಡಳಿತ ಕಮಿಟಿಯ ಅಧ್ಯಕ್ಷ ಸಾಜಿದ್ ಇಬ್ರಾಹಿಂ, ಕೋಶಾಧಿಕಾರಿ ರಾಘವೇಂದ್ರ, ಶಶಿಕುಮಾರ್, ನಾಸಿರ್ ಆಲ್ಫಾ, ರೆಹಮತ್ ಸಾಗರ್, ಸಿದ್ದೀಕ್ ಸ್ಕೈ,ಟಿ.ಕೆ. ಸಲೀಂ ಫರಂಗಿಪೇಟೆ, ಸಿದ್ದೀಕ್ ಯು.ಎಚ್, ಮೊಯ್ದಿನ್ ಜೋಕಟ್ಟೆ ಉಪಸ್ಥಿತರಿದ್ದರು. ಈ ಸಂದರ್ಭ ಸಿಬ್ಬಂದಿಗಳಾದ ಮುಹಮ್ಮದ್ ಸಲೀಂ, ಆಸಿಫ್, ಗೀತಾ ಅವರನ್ನು ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ಅಫ್ಜಲ್ ಪಿಲಾರ್ ಕಾರ್ಯಕ್ರಮ ನಿರೂಪಿಸಿದರು.

ಮಲಾರ್ ಅರಸ್ತಾನ ಅಲ್‌ಮುಬಾರಕ್ ಜುಮಾ ಮಸ್ಜಿದ್  ವತಿಯಿಂದ ಹಯಾತುಲ್ ಇಸ್ಲಾಂ ಮದ್ರಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಮಾಅತ್‌ನ ಅಧ್ಯಕ್ಷ ಎಂಪಿ ಅಬ್ದುಲ್ ರಹ್ಮಾನ್ ಧ್ವಜಾರೋಹಣ ನೆರವೇರಿಸಿದರು. ಖತೀಬ್ ಮುಹಮ್ಮದ್ ಶಫೀಕ್ ಅಲ್-ಫಾಳಿಲ್ ಕೌಸರಿ ದುಆಗೈದರು. ಸದರ್ ಮುಅಲ್ಲಿಂ ಮುಹಮ್ಮದ್ ಶಹೀರ್ ಕೌಸರಿ, ಮುಅಝ್ಝಿನ್ ಅಬ್ದುಲ್ ಜಬ್ಬಾರ್ ಯಮಾನಿ, ಉಪಾಧ್ಯಕ್ಷ ಯಹ್ಯಾ ಮಲಾರ್, ಜೊತೆ ಕಾರ್ಯದರ್ಶಿ ರಿಝ್ವಾನ್ ಸಂದೇಶ ಭಾಷಣಗೈದರು. ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಸ್ವಾಗತಿಸಿ, ವಂದಿಸಿದರು.

ಬಂಟ್ವಾಳ ಕೆರೆಬಳಿ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ಮತ್ತು ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ವತಿಯಿಂದ ಮದ್ರಸ ವಿದ್ಯಾರ್ಥಿಗಳಿಂದ ಗ್ರ್ಯಾಂಡ್ ಮಾರ್ಚ್ ನಡೆಯಿತು. ಮಸೀದಿಯ ಅಧ್ಯಕ್ಷ ಎಚ್.ಉಮರ್ ಫಾರೂಕ್ ಧ್ವಜಾರೋ ಹಣಗೈದರು. ಮಸೀದಿಯ ಖತೀಬ್ ಅನ್ಸಾರ್ ಸಖಾಫಿ ಅಲ್‌ಹಿಕಮಿ ಸಂದೇಶ ಭಾಷಣಗೈದರು. ಮಸೀದಿಯ ಪ್ರಧಾನ ಕಾರ್ಯದರ್ಶಿ ಎಸ್.ಎ ಹಮೀದ್, ಜೊತೆ ಕಾರ್ಯದರ್ಶಿಗಳಾದ ಮುಹಮ್ಮದ್ ಅನ್ಸಾಫ್, ನೌಫಾಲ್ ಜೆ, ಕೋಶಾಧಿಕಾರಿ ಪಿ.ಎಚ್ ಉಸ್ಮಾನ್, ಉಪಾಧ್ಯಕ್ಷ ಕೆ.ಎ.ಶರೀಫ್, ಕೆಐಎ ಅಧ್ಯಕ್ಷ ಅಬ್ದುಲ್ ಮಜೀದ್ ಎಸ್.ಎ. ಮತ್ತಿತರರು ಉಪಸ್ಥಿತರಿ ದ್ದರು. ಹಯಾತುಲ್ ಇಸ್ಲಾಂ ಮದ್ರಸದ ಶಿಕ್ಷಕ ಸದಕತುಲ್ಲಾಹ್ ಮದನಿ ದುಆಗೈದರು. ಶಿಕ್ಷಕ ಉಸ್ಮಾನ್ ಹಿಮಮಿ ಸ್ವಾಗತಿಸಿದರು. ಕಾರ್ಯದರ್ಶಿ ಅಹ್ಮದ್ ಸಗೀರ್ ವಂದಿಸಿದರು.


















 


 


 


 


 


 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News