ಡಿ.ಕೆ.ಎಸ್.ಸಿ.ಯಿಂದ ಹೋಲಿ ಕುರ್ ಆನ್ ಅವಾರ್ಡ್ ಕಾರ್ಯಕ್ರಮ ಸಮಾರೋಪ

Update: 2023-09-06 04:34 GMT

ಬಂಟ್ವಾಳ, ಸೆ.6: ಡಿ.ಕೆ.ಎಸ್. ಸಿ. ಜಿಲ್ಲಾ ಸಮಿತಿಯ ವತಿಯಿಂದ ಹೋಲಿ ಕುರ್ ಆನ್ ಅವಾರ್ಡ್ ಕಾರ್ಯಕ್ರಮವು ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂನಲ್ಲಿ ಇತ್ತೀಚೆಗೆ ಜರುಗಿತು.

ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಯುಎಇ ರಾಷ್ಟ್ರೀಯ ಸಮಿತಿಯ ಗೌರವಾಧ್ಯಕ್ಷ ಸೈಯದ್ ತ್ವಾಹಾ ಬಾಫಕಿ ತಂಙಳ್ ಕುಂಬೋಳ್ ದುಆಗೈದರು. ಅಬ್ದುಲ್ ರಹೀಮ್ ಸಖಾಫಿ ಅಲ್ ಅಝ್ಹರಿ ಕಿರಾಅತ್ ಪಠಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷ ಹುಸೈನ್ ಹಾಜಿ ಕಿನ್ಯ ಸ್ವಾಗತಿಸಿದರು. ಜಿಲ್ಲಾ ಸಲಹೆಗಾರ ಹಾಜಿ ಇಸ್ಮಾಯೀಲ್ ಶಾಫಿ ವಿಟ್ಲ ವಂದಿಸಿದರು.

ಸಂಜೆಯವರೆಗೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 24 ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಕುರ್ ಆನ್ ಸ್ಪರ್ಧೆಯು ಹಾಫಿಲ್ ಹಾರಿಸ್ ಸಅದಿ ಮತ್ತು ಹಾಫಿಲ್ ರಫೀಕ್ ನಿಝಾಮಿ ನೇತೃತ್ವದಲ್ಲಿ ನಡೆಯಿತು. ತೀರ್ಪುಗಾರರಾಗಿ ಹಾಫಿಲ್ ಶುಹೈಬ್ ಅಮಾನಿ, ಹಾಫಿಲ್ ಅಬ್ದುರ್ರಹ್ಮಾನ್ ಸಖಾಫಿ ಅಲ್ ಕಾಮಿಲ್, ಹಾಫಿಲ್ ಹಸೈನಾರ್ ಮಹ್ಳರಿ ಉಪಸ್ಥಿತರಿದ್ದರು.

ಉಡುಪಿ,ಚಿಕ್ಕಮಗಳೂರು, ಹಾಸನ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಆಗಮಿಸಿ ದುವಾಶೀರ್ವಚನ ನೀಡಿದರು.

ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವು ಡಿ.ಕೆ.ಎಸ್.ಸಿ. ಕೇಂದ್ರ ಸಮಿತಿಯ ಅಧ್ಯಕ್ಷ ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆಯಲ್ಲಿ ನಡೆಯಿತು. ಸುನ್ನಿ ಗೈಡೆನ್ಸ್ ಬ್ಯೂರೋ ಅಧ್ಯಕ್ಷ ಸೈಯದ್ ಹಬೀಬುಲ್ಲಾಹ್ ಪೂಕೋಯ ತಂಙಳ್ ದುಆ ನೆರವೇರಿಸಿದರು. ಝೈನಿ ಕಾಮಿಲ್ ಸಖಾಫಿ ಹಾಗೂ ರಫೀಕ್ ಮಾಸ್ಟರ್ ಮಾತನಾಡಿ ಶುಭ ಹಾರೈಸಿದರು.

ಕುರ್ ಆನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಹಾಫಿಲ್ ಜಿ.ಎಂ.ಮುಹಮ್ಮದ್ ಸುಫ್ಯಾನ್ ರಿಗೆ ರೂ. 50,000 ನಗದು, ಪಾರಿತೋಷಕ ಹಾಗೂ ಸ್ಮರಣಿಕೆ, ದ್ವಿತೀಯ ಸ್ಥಾನ ಗಳಿಸಿದ ಸಿ.ಎ. ಮುಹಮ್ಮದ್ ತ್ವಾಹಿರ್ ರಿಗೆ ರೂ. 25,000 ನಗದು, ಪಾರಿತೋಷಕ ಮತ್ತು ಸ್ಮರಣಿಕೆ ಹಾಗೂ ತೃತೀಯ ಸ್ಥಾನ ಗಳಿಸಿದ ಮುಹಮ್ಮದ್ ಫಾಯಿಝ್ ರಿಗೆ ರೂ.15,000 ನಗದು, ಪಾರಿತೋಷಕ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಲ್ಲದೆ ಎಲ್ಲ ಸ್ಪರ್ಧಾರ್ಥಿಗಳಿಗೆ ಪಾರಿತೋಷಕ ಹಾಗೂ ಸಮಾಧಾನಕರ ಬಹುಮಾನ, ಸುನ್ನೀ ಗೈಡೆನ್ಸ್ ಬ್ಯೂರೋ ಪ್ರಕಾಶನದ ಪವಿತ್ರ ಕುರ್ ಆನ್ ವ್ಯಾಖ್ಯಾನ ಪ್ರತಿಯನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಝಕರಿಯ ಕೊಂಚಾರ್ ಬಾರ್ಕೊ, ಹಾಜಿ ಕೆ.ಎಸ್. ಸಈದ್ ಚಾರಿಟೇಬಲ್ ಟ್ರಸ್ಟ್, ಮುಹಮ್ಮದ್ ಕಮರಡಿ ಚಾಂಪಿಯನ್ ಕಾಂಟ್ರಾಕ್ಟಿಂಗ್, ಮಂಗಳೂರು ಘಟಕಾಧ್ಯಕ್ಷ ಎನ್.ಎಸ್.ಅಬ್ದುಲ್ಲಾಹ್, ಮುಹಮ್ಮದ್ ಹಾಜಿ ಸಾಗರ್ ಸಭಾ ಭವನ, ಕಚೇರಿ ಕಾರ್ಯದರ್ಶಿ ಮುಹಮ್ಮದ್ ರಮೀಝ್ ಮೂಡುಶೆಡ್ಡೆ ಮುಂತಾದವರನ್ನು ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸ್ಪರ್ಧಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಹಾಫಿಲ್ ಹಾರಿಸ್ ಸಅದಿ, ಹಾಫಿಲ್ ರಫೀಕ್ ನಿಝಾಮಿ, ತೀರ್ಪುಗಾರರಾದ ಹಾಫಿಲ್ ಅಬ್ದುರ್ರಹ್ಮಾನ್ ಸಖಾಫಿ ಅಲ್ ಕಾಮಿಲ್, ಹಾಫಿಲ್ ಶುಹೈಬ್ ಅಮಾನಿ, ಹಾಫಿಲ್ ಹಸೈನಾರ್ ಮಹ್ಳರಿಯವರಿಗೆ ಸ್ಮರಣಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಮ್ತಾಝ್ ಅಲಿ, ಸುಲ್ತಾನ್ ಗೋಲ್ಡ್ ನ ಅಬ್ದುಲ್ ರವೂಫ್, ಸುಲ್ತಾನ್ ಬಿಲ್ಡರ್ಸ್ ಯು.ಬಿ.ಮುಹಮ್ಮದ್, ಅಲ್ ಝಯಾನ್ ಇಲ್ಯಾಸ್, ಕೇಂದ್ರ ಸಮಿತಿಯ ಸಂವಹನ ಕಾರ್ಯದರ್ಶಿಗಳಾದ ಕೆ.ಎಚ್.ರಫೀಕ್ ಸೂರಿಂಜೆ, ಯೂಸುಫ್ ಅರ್ಲಪದವು, ಕಾರ್ಯದರ್ಶಿ ಅಬೂಬಕರ್ ಬರ್ವ, ಯು.ಎ.ಇ. ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಎಂ.ಇ.ಮೂಳೂರು, ಕಾರ್ಯಾಧ್ಯಕ್ಷ ಅಬ್ದುಲ್ ರಹಿಮಾನ್ ಸಜಿಪ, ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಹುಸೈನ್ ಹಾಜಿ ಕಿನ್ಯ, ಉಪಾಧ್ಯಕ್ಷ ಅಬ್ದುಲ್ ಬಶೀರ್ ಕೈಕಂಬ, ಕೋಶಾಧಿಕಾರಿ ಝೈನುದ್ದೀನ್ ಮುಕ್ವೆ, ಜೊತೆ ಕಾರ್ಯದರ್ಶಿ ಶರೀಫ್ ಬಜ್ಪೆ, ಯು.ಡಿ.ಇಬ್ರಾಹೀಂ ಉಳ್ಳಾಲ, ಸಂಘಟಕರಾದ ಮನ್ಸೂರ್ ಕೃಷ್ಣಾಪುರ, ಸದಸ್ಯರಾದ ಅಬ್ದುಲ್ ರಹಿಮಾನ್ ಕುಪ್ಪೆಪದವು, ಎಂ.ಎಂ.ಕುಂಞಿ, ಅನ್ಸಾರ್ ಕಾನ, ಫಾರೂಕ್ ಸುರತ್ಕಲ್, ಅಲಿ ಅಬ್ಬಾಸ್, ಇವೆಂಟ್ ಸಮಿತಿಯ ಅಧ್ಯಕ್ಷ ಅನ್ವರ್ ಹುಸೈನ್ ಗೂಡಿನಬಳಿ, ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ದುಬಾಲ್, ಮರ್ಕಝ್ ಸಮಿತಿಯ ಉಪಾಧ್ಯಕ್ಷ ಬದ್ರುದ್ದೀನ್ ಬಜ್ಪೆ, ಪ್ರಧಾನ ಕಾರ್ಯದರ್ಶಿ ವೈ.ಬಿ.ಸಿ.ಬಶೀರ್, ಕೋಶಾಧಿಕಾರಿ ಅಬ್ದುಲ್ ಹಮೀದ್ ಸುಳ್ಯ, ಅಬೂಬಕರ್ ನೇಜಾರ್, ದೇರಳಕಟ್ಟೆ ಘಟಕದ ಅಧ್ಯಕ್ಷ ಸಿದ್ದೀಕ್ ದೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ಇ.ಕೆ.ಇಬ್ರಾಹೀಂ ಹಾಜಿ ಕಿನ್ಯ, ಕೋಶಾಧಿಕಾರಿ ಅಬ್ಬಾಸ್ ಎಲಿಮಲೆ, ಉಪ್ಪಿನಂಗಡಿ ಘಟಕದ ಅಧ್ಯಕ್ಷ ಮುಹಮ್ಮದ್ ಕುಂಞಿ, ಪ್ರಧಾನ ಕಾರ್ಯದರ್ಶಿ ಝಕರಿಯ ಕೆಮ್ಮಾರ, ಬೆಳಪು ಘಟಕದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕೊಲ್ನಾಡ್, ಅಬ್ದುರ್ರಝಾಕ್ ನಾಟೆಕಲ್, ರಝಾಕ್ ಮುಟ್ಟಿಕಲ್ ಡಿ.ಕೆ.ಎಸ್.ಸಿ. ಸದಸ್ಯರು, ಹಿತೈಷಿಗಳು ಮರ್ಕಝ್ ದಅ್ ವಾ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

ಮರ್ಕಝ್ ವ್ಯವಸ್ಥಾಪಕ ಮುಸ್ತಫ ಸಅದಿ ಉಸ್ತಾದ್ ಸ್ವಾಗತಿಸಿದರು. ಮರ್ಕಝ್ ಉಪಾಧ್ಯಕ್ಷ ಇಸ್ಮಾಯೀಲ್ ಹಾಜಿ ಕಿನ್ಯ ವಂದಿಸಿದರು. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಬಳ್ಕುಂಜೆ ಹಾಗೂ ಕಲಂದರ್ ಮರ್ಕಝ್ ಕಾರ್ಯಕ್ರಮ ನಿರೂಪಿಸಿದರು.

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News