ಮಂಗಳೂರು ವಿವಿ ಕ್ಯಾಂಪಸ್ ಹೊರಗಿನವರ ಪ್ರವೇಶ ಅನಗತ್ಯ: ಕಾಂಗ್ರೆಸ್

Update: 2023-09-08 12:31 GMT

ಮಂಗಳೂರು, ಸೆ.8: ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಹೊರಗಿನವರ ಪ್ರವೇಶ ಅನಗತ್ಯ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ರಾಜ್ಯ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಹಬ್ಬಗಳು ದೇಶಾದ್ಯಂತ ಜನರ ಕೂಡುವಿಕೆಯಲ್ಲಿ ಜನರಿಂದಲೇ ನಡೆಸಲ್ಪಡುತ್ತವೆ. ಸರಕಾರಿ ಕಚೇರಿಗಳಲ್ಲಿ ಹಬ್ಬಗಳನ್ನು ಕಚೇರಿ ಸಿಬ್ಬಂದಿಗಳೇ ನಡೆಸುವುತ್ತಾರೆ. ಗಣೇಶ ಹಬ್ಬದ ವಿಚಾರವಾಗಿ ಮಂಗಳೂರು ವಿವಿಯಲ್ಲಿ ರಾಜಕಾರಣಿ ಗಳ ಪ್ರವೇಶದಿಂದ ಗೊಂದಲಕ್ಕೀಡಾಗಿರುವುದು ವಿಷಾದನೀಯ. ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಅನೇಕ ವರ್ಷಗಳಿಂದ ಗಣೇಶ ಹಬ್ಬವನ್ನು ಆಚರಿಸಿಕೊಂಡು ಬರಲಾತ್ತಿವೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕೂಡುವಿಕೆಯಿಂದ ಈ ಆಚರಣೆ ನಡೆಯಬೇಕೇ ವಿನಃ ಹೊರಗಿನವರ ಪ್ರವೇಶ ಆವಶ್ಯವಿರುವುದಿಲ್ಲ. ಕ್ಯಾಂಪಸ್‌ಗೆ ಸಂಬಂಧಪಟ್ಟ ವಿಚಾರವಾದ ಕಾರಣ ಕ್ಯಾಂಪಸ್‌ಗೆ ಅದನ್ನು ಸೀಮಿತಗೊಳಿಸಬೇಕು ಎಂದು ತಿಳಿಸಿದ್ದಾರೆ.

ಮಂಗಳೂರು ವಿವಿಯಲ್ಲಿ ಹಣಕಾಸಿನ ತೊಂದರೆಯಿದೆ. ಈ ಹಿಂದೆ ವಿವಿಯಿಂದ ಸುಮಾರು 3 ಲಕ್ಷ ರೂ. ವೆಚ್ಚಮಾಡಿದ್ದಕ್ಕೆ ಲೆಕ್ಕಪತ್ರ ಪರಿಶೋಧಕರು ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಮಧ್ಯೆ ಶಾಸಕರೊಬ್ಬರು ಮಧ್ಯಪ್ರವೇಶಿಸಿ ಖರ್ಚು ವೆಚ್ಚದ ಕುರಿತಾಗಿ ಅನಗತ್ಯ ಗೊಂದಲ ನಿರ್ಮಿಸಿರುವುದು ಮತ್ತು ಬಾಹ್ಯ ಶಕ್ತಿಗಳು ವಿವಿ ಕ್ಯಾಂಪಸ್‌ನೊಳಗಡೆ ಹಸ್ತಕ್ಷೇಪ ನಡೆಸುತ್ತಿರುವುದು ಖಂಡನೀಯ ಎಂದು ಹರೀಶ್ ಕುಮಾರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News