ಟೆಲಿಗ್ರಾಮ್ ಆ್ಯಪ್ ಮೂಲಕ ಟಾಸ್ಕ್ ನೀಡಿ ವಂಚನೆ
Update: 2023-11-15 16:36 GMT
ಮಂಗಳೂರು, ನ.15: ಟೆಲಿಗ್ರಾಮ್ ಆ್ಯಪ್ ಮೂಲಕ ಟಾಸ್ಕ್ ನೀಡಿ 6.91 ಲ.ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿ ರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.1ರಂದು ದೂರುದಾರರ ಮೊಬೈಲ್‌ಗೆ ಯುಟ್ಯೂಬ್ ಮೂಲಕ ಬಂದ ಜಾಹೀರಾತು ಕ್ಲಿಕ್ ಮಾಡಿದಾಗ ಅದರಲ್ಲಿ ಟೆಲಿಗ್ರಾಂ ಖಾತೆಯ ಲಿಂಕ್ ಇತ್ತು. ಅದನ್ನು ತೆರೆದಾಗ ಅದರಲ್ಲಿ ಟಾಸ್ಕ್‌ಗಳನ್ನು ಪೂರ್ಣಗೊಳಿಸಿ ಹಣ ಗಳಿಸಬಹುದು ಎಂದು ತಿಳಿಸಲಾ ಗಿತ್ತು. ಅದರಂತೆ ದೂರುದಾರರು 9 ಟಾಸ್ಕ್‌ಗಳನ್ನು ಪೂರ್ಣಗೊಳಿಸಿದ್ದರು. ಆದರೆ ದೂರುದಾರರಿಂದಲೇ ಹಂತ ಹಂತವಾಗಿ 6,91,714 ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.