ಹೈದರಾಬಾದ್‌ನ ಬೇಗಂಪೇಟೆ ಇನ್‌ಸ್ಪೆಕ್ಟರ್‌ಗೆ ದಂಡ: ದ.ಕ.ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ

Update: 2023-07-20 13:31 GMT

ಮಂಗಳೂರು, ಜು.20: ಪ್ರಕರಣವೊಂದಕ್ಕೆ ಸಂಬಂಧಿಸಿ ನಗರದ ನ್ಯಾಯಾಲಯದಲ್ಲಿ ಆದೇಶವಾಗಿರುವುದನ್ನು ಜಾರಿಗೊಳಿಸಲು ನಿರ್ಲಕ್ಷ್ಯ ತಾಳಿದ ಹೈದರಾಬಾದ್‌ನ ಬೇಗಂಪೇಟೆ ಠಾಣೆಯ ಇನ್‌ಸ್ಪೆಕ್ಟರ್‌ಗೆ ದ.ಕ.ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು 200 ರೂ. ದಂಡ ವಿಧಿಸಿದೆ.

ಎರಡು ವಾರದೊಳಗೆ ದಂಡ ಪಾವತಿಸದಿದ್ದಲ್ಲಿ ಎರಡು ದಿನ ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಂಗಳೂರು ನ್ಯಾಯಾಲಯವು ಎದುರುದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಹೈದರಾಬಾದ್ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಬೇಗಂ ಠಾಣೆಯ ಇನ್‌ಸ್ಪೆಕ್ಟರ್‌ಗೆ ಆದೇಶಿಸಿತ್ತು. ಆದರೆ, ಈ ಇನ್‌ಸ್ಪೆಕ್ಟರ್ ಎದುರುದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸದ್ದರಿಂದ ದ.ಕ.ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಪ್ರಕಾಶ್ ಕೆ. ಮತ್ತು ಸದಸ್ಯರನ್ನು ಒಳಗೊಂಡ ಪೀಠವು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಸಿಪಿಸಿ-345ರ ಪ್ರಕಾರ 200 ರೂ. ದಂಡ ವಿಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News