ಮುಡಿಪು ನಾಗರಿಕ ಸಮಿತಿ ವತಿಯಿಂದ ʼಬಂಧುತ್ವʼ ಕಾರ್ಯಕ್ರಮ, ಸೌಹಾರ್ದ ಇಫ್ತಾರ್ ಕೂಟ

Update: 2024-04-03 06:29 GMT

ಕೊಣಾಜೆ: ನಾಗರಿಕ ಸಮಿತಿ ಮುಡಿಪು ಇದರ ಆಶ್ರಯದಲ್ಲಿ ಮುಡಿಪು ಜಂಕ್ಷನ್ ಸಮೀಪ ಮಂಗಳವಾರ ಸಂಜೆ ʼಬಂಧುತ್ವʼ ಕಾರ್ಯಕ್ರಮದ ಅಂಗವಾಗಿ ನಡೆದ ಸೌಹಾರ್ದ ಇಪ್ತಾರ್ ಕೂಟವು ವಿವಿಧ ಜಾತಿ, ವರ್ಗದ ಸಾವಿರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಮಾತನಾಡಿ, ನಮ್ಮ ದೇಶವು ಸೌಹಾರ್ದತೆಯ ಪ್ರತೀಕವಾಗಿದೆ. ಹಿರಿಯರ ಮಾರ್ಗದರ್ಶನದೊಂದಿಗೆ ಎಲ್ಲಾ ಜಾತಿ, ವರ್ಗದ ಜನರು ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣದ‌ ಸಂಕಲ್ಪ ಮಾಡಬೇಕಿದೆ. ಪ್ರತಿಯೊಂದು ಕಡೆಯಲ್ಲೂ ಸೌಹಾರ್ದತೆಯ ವಾತವರಣ ಸೃಷ್ಟಿಸುವುದರೊಂದಿಗೆ ರಾಷ್ಟ್ರ ನಿರ್ಮಾಣ‌ದ ಕಾರ್ಯವಾಗಬೇಕು.‌ ಮುಡಿಪುವಿನಲ್ಲಿ ನಾಗರಿಕ ಸಮಿತಿ ವತಿಯಿಂದ ನಡೆದ ಬಂಧುತ್ವ ಕಾರ್ಯಕ್ರಮವು ಸಾಮಾಜಿಕ ಚಿಂತನೆಯ,‌‌ ಸಾಮರಸ್ಯದ ಕಾರ್ಯಕ್ರಮವಾಗಿದೆ ಎಂದರು. ಇಂತಹ ಮಾದರಿ ಕಾರ್ಯಕ್ರಮ ಪ್ರತಿ ಗ್ರಾಮಗಳಲ್ಲೂ ಆಗಬೇಕಿದ್ದು, ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಇದು ಪ್ರೇರಣೆಯಾಗಲಿದೆ ಎಂದರು.‌

ಕಣಂತೂರು ಕ್ಷೇತ್ರದ ಆಡಳಿತ ಮೊಕ್ತೇಸರರಾದ ದೇವಿಪ್ರಸಾದ್ ಪೊಯ್ಯತ್ತಾಯ ಅವರು ಮಾತನಾಡಿ, ಭಾರತದೇಶ ಎನ್ನುವುದು ಸೌಹಾರ್ದತೆಯ ರಾಷ್ಟ್ರ. ಪ್ರತಿಯೊಂದು ಧರ್ಮವೂ ದಾನ ಧರ್ಮದ ಮೂಲಕ ಉತ್ತಮ ಶಾಂತಿಯುತ ಸಮನ್ವಯ ತೆಯ ಸಮಾಜ ನಿರ್ಮಿಸಬೇಕೆಂದು ಹೇಳಿದೆ.ಆದ್ದರಿಂದ ನಾವಲ್ಲರೂ ಒಟ್ಟಿಗೆ ಸೇರಿ ಸೌಹಾರ್ದತೆಯ ಬದುಕು ಸಾಗಿಸಬೇಕು ಎಂದರು.

ಮುಡಿಪು ಸಂತ ಜೋಸೆಫ್ ವಾಜ್ ಚರ್ಚ್ ನ ಧರ್ಮ ಗುರುಗಳಾದ ಫಾದರ್ ಅಸ್ಸಿಸಿ ರೆಬೆಲ್ಲೋ ಅವರು ಮಾತನಾಡಿ, ಬಂಧುತ್ವದ ಇಫ್ತಾರ್ ಕೂಟವು ಸೌಹಾರ್ದತೆಯ ವಾತಾವರಣ ಸೃಷ್ಟಿಸಿ ದೆ. ಬಂಧುತ್ವ, ಸಮನ್ವಯತೆಯ ಎಂದೆಂದಿಗೂ ಇರಲಿ. ಪ್ರತಿಯೊಬ್ಬರು ಪರಸ್ಪರರನ್ನು ಪ್ರೀತಿಸಿ ಶಾಂತಿ ನೆಮ್ಮದಿಯಿಂದ ಜೀವನ ನಡೆಸೋಣ ಎಂದರು.

ಹೂಹಾಕುವ ಕಲ್ಲು ಜುಮ್ಮಾ ಮಸೀದಿಯ ಖತೀಬರಾದ ಮುಹಮ್ಮದ್ ಇಕ್ಬಾಲ್ ಫಾಳಿಲಿ ಅವರು ಮಾತನಾಡಿ, ಎಲ್ಲಾ ಧರ್ಮದವರು ಒಟ್ಟು ಸೇರಿ ಮಾಡುವ ಇಂತಹ ಕಾರ್ಯಕ್ರಮ ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ, ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ರಮೇಶ್ ಶೇಣವ, ಪುಂಡರೀಕಾಕ್ಷ ಮೂಲ್ಯ, ರಾಧಾಕೃಷ್ಣ ಉಮಿಯ, ಮಾರ್ಷೆಲ್ ಡಿಸೋಜ, ಜೋಸೆಫ್ ಕುಟಿನ್ಹ, ಕುರ್ನಾಡು ಪಂಚಾಯತಿ ಅಧ್ಯಕ್ಷೆ ಲೋಲಾಕ್ಷಿ ಶೆಟ್ಟಿ, ಮುಖಂಡರಾದ ಇಬ್ರಾಹಿಂ ನಡುಪದವು, ಅಬ್ದುಲ್ ಜಲೀಲ್ ಮೋಂಟುಗೋಳಿ, ಎನ್ .ಎಸ್.ನಾಸೀರ್ ನಡುಪದವು, ಅರುಣ್ ಡಿಸೋಜ, ತಾಜುದ್ದೀನ್ ಕೊಣಾಜೆ, ಶಿಕ್ಷಕರಾದ‌ ರವೀಂದ್ರ ರೈ ಹರೇಕಳ,‌ ರಾಜೇಶ್ ಪಿ, ವಿಜೇಶ್ ‌ನಾಯ್ಕ್, ಮಹಮ್ಮದ್ ಮೋನು, ಮುಸ್ತಫಾ ಹರೇಕಳ,‌ನವಾಝ್ ನರಿಂಗಾನ, ಶೀನ ಶೆಟ್ಟಿ, ಹೈದರ್ ಕೈರಂಗಳ ಉಪಸ್ಥಿತರಿದ್ದರು.

ಮುಡಿಪು ನಾಗರಿಕ ಸಮಿತಿಯ ದೇವದಾಸ ಭಂಡಾರಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಅಬ್ದುಲ್ ರಝಾಕ್ ಕುಕ್ಕಾಜೆ ನಿರೂಪಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News