ಕೃಷ್ಣಾಪುರ ನ್ಯೂ ಫ್ರೆಂಡ್ಸ್ ಸರ್ಕಲ್‌ನಿಂದ ಸ್ವಾತಂತ್ರ್ಯೋತ್ಸವ: ಡಾ.ಯು.ಟಿ.ಇಫ್ತಿಕಾರ್ ಅಲಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ವಿತರಣೆ
ಸುರತ್ಕಲ್: ಇಲ್ಲಿನ ಕೃಷ್ಣಾಪುರ ನ್ಯೂ ಫ್ರೆಂಡ್ಸ್ ಸರ್ಕಲ್ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ಆಚರಣೆ ಮತ್ತು ಈ ಪ್ರಯುಕ್ತ ಇಂಡಿಯನ್ ಅಸೋಸಿಯೇಷನ್ ಆಫ್ ಗ್ರಾಜುಯೇಟ್ ಫಿಸಿಯೋಥೆರಪಿ ಇದರ ಅಧ್ಯಕ್ಷರಾಗಿ ಆಯ್ಕೆಗೊಂಡ ಡಾ. ಯು.ಟಿ. ಇಫ್ತಿಕಾರ್ ಅಲಿ ಫರೀದ್ ಅವರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭವು ಗುರುವಾರ ಸಂಜೆ ಕೃಷ್ಣಾಪುರದಲ್ಲಿನ ಸಂಸ್ಥೆಯ ವಠಾರದಲ್ಲಿ ಜರುಗಿತು.
ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜೀವ್ ಗಾಂಧಿ ಆರೋಗ್ಯ ವಿವಿ ಸಿಂಡಿಕೇಟ್ ಸದಸ್ಯ ಹಾಗೂ ಇಂಡಿಯನ್ ಅಸೋಸಿಯೇಷನ್ ಆಫ್ ಗ್ರಾಜುಯೇಟ್ ಫಿಸಿಯೋಥೆರಪಿ ಇದರ ಅಧ್ಯಕ್ಷ ಯು.ಟಿ. ಇಫ್ತಿಕಾರ್ ಫರೀದ್ ಅವರು, ಕೃಷ್ಣಾಪುರ ನ್ಯೂ ಫ್ರೆಂಡ್ಸ್ ಸರ್ಕಲ್ ನೊಂದಿಗಿನ ಒಡನಾಟವನ್ನು ವಿವರಿಸಿದರು. ಜೊತೆಗೆ ಸುರತ್ಕಲ್ ಪರಿಸರದಲ್ಲಿ ಸಂಸ್ಥೆಯು ನಡೆಸುತ್ತಿರುವ ಸಾಮಾಜಿಕ ಕಾಳಜಿಯ ಕಾರ್ಯಗಳು ಸಂಘ ಸಂಸ್ತೆಗಳಿಗೆ ಮಾದರಿ ಎಂದು ಶ್ಲಾಘನೆ ವ್ಯಕ್ತ ಪಡಿಸಿದರು.
ಬಳಿಕ ಮಾತನಾಡಿದ ಕೆಎಫ್ ಡಿಸಿಎಲ್ ಅಧ್ಯಕ್ಷೆ ಮಾಲಾ ಅವರು, ನಮ್ಮ ಹಿರಿಯರು ಪ್ರಾಣ ತ್ಯಾಗ ಮಾಡಿ ಪಡೆದು ಕೊಂಡಿರುವ ಸ್ವಾತಂತ್ರ್ಯ ಇನ್ನೂ ನಮಗೆ ದೊರೆತಿಲ್ಲ. ಗಾಂಧಿ ಬಯಸಿದ್ದಂತಹಾ ಒಂಟಿ ಮಹಿಳೆ ಮಧ್ಯ ರಾತ್ರಿ ರಸ್ತೆಯಲ್ಲಿ ತೆರಳಬಹುದಾಷ್ಟು ಸ್ವಾತಂತ್ರ್ಯ ಇನ್ನೂ ನಮಗೆ ದೊರೆತಿಲ್ಲ ಎಂದು ನುಡಿದರು.
ಸಮಾರಂಭದಲ್ಲಿ ಇಂಡಿಯನ್ ಅಸೋಸಿಯೇಷನ್ ಆಫ್ ಗ್ರಾಜುಯೇಟ್ ಫಿಸಿಯೋಥೆರಪಿ ಇದರ ಅಧ್ಯಕ್ಷರಾಗಿ ಆಯ್ಕೆ ಗೊಂಡ ಡಾ. ಯು.ಟಿ. ಇಫ್ತಿಕಾರ್ ಅಲಿ ಫರೀದ್ ಅವರನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಿದರು. ಅಲ್ಲದೆ, ಸ್ಥಳೀಯ 12 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಮಮ್ತಾಝ್ ಅಲಿ, ಅಲ್ ಬದ್ರಿಯಾ ಎಜುಕೇಶನ್ ಟ್ರಸ್ಟ್ ನ ಅಬೂಬಕರ್ ಎನ್ಎಂಪಿಟಿ, ಕಾಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ತಸ್ಲೀಮ್ ಅರಾ, ಸಂಸ್ಥೆಯ ಅಧ್ಯಕ್ಷ ಅಹ್ಮದ್ ಕಬೀರ್, ಉಪಾಧ್ಯಕ್ಷ ಮುಹಮ್ಮದ್ ಸಿರಾಜ್, ಪ್ರಧಾನ ಕಾರ್ಯದರ್ಶಿ ಝಾಕೀರ್ ಕೆ.ಎಂ., ಎನ್ ಆರ್ ಐ ಯೂನಿಟ್ ಅಧ್ಯಕ್ಷ ಅನೀಸ್ ಜುಬೈಲ್, ಮಾಜಿ ಅಧ್ಯಕ್ಷರಾದ ಮಾಜಿ ಅಧ್ಯಕ್ಷರಾದ ಸತ್ತಾರ್ , ಸಾದಿಕ್, ಮಾಜೀ ಉಪಾಧ್ಯಕ್ಷ ರಿಯಾಝ್ ಮಟನ್, ಸಿನಾನ್, ರವೂಫ್ ಮೊದಲಾದವರು ಉಪಸ್ಥಿತರಿದ್ದರು. ಸ್ಟಾರ್ ನವಾಝ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಗೈದರು.