ಉಳ್ಳಾಲ ಜುಮಾ ಮಸೀದಿ, ದರ್ಗಾ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ಳಾಲ: ಇಲ್ಲಿನ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯದ್ ಮದನಿ ದರ್ಗಾ ಸಮಿತಿ ವತಿಯಿಂದ 78 ನೇ ಸ್ವಾತಂತ್ರ್ಯೋತ್ಸವವನ್ನು ಮಸೀದಿ ವಠಾರದಲ್ಲಿ ಆಚರಿಸಲಾಯಿತು.
ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಅಂದು ಹಿಂದು, ಮುಸ್ಲಿಮ್, ಕ್ರೈಸ್ತರು ಒಂದಾಗಿ ಸ್ವಾತಂತ್ರ್ಯೋತ್ಸವದಲ್ಲಿ ಹೋರಾಡಿದ್ದಾರೆ, ಭಾರತದ ಆತ್ಮ ಜಾತ್ಯತೀತವಾಗಿದೆ, ನಮ್ಮ ಟ್ರಸ್ಟ್ ನಲ್ಲಿ ಸಮನ್ವಯ ಶಿಕ್ಷಣ , ಧಾರ್ಮಿಕ ಮತ್ತು ಮೌಕಿಕ ಶಿಕ್ಷಣ ನೀಡುತ್ತಿದ್ದೇವೆ, ಮುಂದೆ ಈ ದೇಶಕ್ಕಾಗಿ ದುಡಿದು ದೇಶವನ್ನು ಮುನ್ನಡೆಸುವವರಾಗ ಬೇಕು ಎಂದು ಕರೆ ನೀಡಿದರು.
ಕೇಂದ್ರ ಜುಮ್ಮಾ ಮಸೀದಿ ಖತೀಬ್ ಇಬ್ರಾಹಿಂ ಸಅದಿ ದುಆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಯ್ಯದ್ ಮದನಿ ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷರಾದ ಅಶ್ರಫ್ ಅಹ್ಮದ್ ರೈಟ್ ವೇ, ಹಸೈನಾರ್ ಮದನಿನಗರ, ಜತೆ ಕಾರ್ಯದರ್ಶಿ ಮುಸ್ತಫ ಮದನಿ ನಗರ, ಇಸಾಕ್ ಮೇಲಂಗಡಿ, ಕೋಶಾಧಿಕಾರಿ ನಾಝಿಮ್ ಮುಕ್ಕಚ್ಚೇರಿ, ಅರಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಶ್ರಫ್ ಹಾಜಿ ಕೋಡಿ, ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಪಿಲಾರ್, ದರ್ಗಾ ಸದಸ್ಯರಾದ ಯು.ಡಿ.ಅಶ್ರಫ್ ಅಳೇಕಲ, ಬಶೀರ್ ಹಾಜಿ ಕೋಡಿ, ಖಲೀಲ್ ಸುಂದರಿ ಭಾಗ್, ಅಬ್ದುಲ್ ಹಮೀದ್ ಚೆಂಬುಗುಡ್ಡೆ, ಝೈನುದ್ದೀನ್ ಮೇಲಂಗಡಿ, ತಂಝೀಲ್ ಮುಕ್ಕಚ್ಚೇರಿ, ಹನೀಫ್ ಮಾರ್ಗತಲೆ, ಶರೀಅತ್ ಕಾಲೇಜು ಪ್ರಾಂಶುಪಾಲರಾದ ಅಹ್ಮದ್ ಕುಟ್ಟಿ ಸಖಾಫಿ, ಖತೀಬರಾದ ಇಬ್ರಾಹಿಮ್ ಸ ಅದಿ, ಅರಬಿಕ್ ಟ್ರಸ್ಟ್ ಕಾಲೇಜಿನ ಪ್ರೊಫೆಸ್ಸರ್ ನಜೀಬ್ ನೂರಾನಿ, ನುಹ್ಮಾನ್ ನೂರಾನಿ, ಇಬ್ರಾಹೀಮ್ ಅಹ್ಸನಿ ಶರೀಅತ್ ಕಾಲೇಜಿನ ಪ್ರಾಧ್ಯಾಪಕರು, ದರ್ಗಾ ಸದಸ್ಯರು, ಅರಬಿಕ್ ಟ್ರಸ್ಟ್, ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಯ್ಯದ್ ಮದನಿ ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು, ಅಬ್ದುಲ್ ಸಲಾಮ್ ಮದನಿ ಕಾರ್ಯಕ್ರಮ ನಿರೂಪಿಸಿದರು.