ಕಾಪು: ಭಾರೀ ಮಳೆಗೆ ಹಲವು ಮನೆಗಳಿಗೆ ಹಾನಿ; ಅಪಾರ ನಷ್ಟ

Update: 2023-07-25 16:18 GMT

ಕಾಪು : ಕಾಪು ತಾಲ್ಲೂಕಿನಾದ್ಯಂತ ಕಳೆದ ರಾತ್ರಿಯಿಂದ ಗಾಳಿ, ಮಳೆಗೆ ಮರಗಳು ಬಿದ್ದು ಹಲವು ಮನೆಗಳಿಗೆ ಹಾನಿಯಾಗಿವೆ. ಕಾಪು ತಾಲ್ಲೂಕಿನಲ್ಲಿ ಗಾಳಿ, ಮಳೆಗೆ ಮನೆಗಳಿಗೆ ಒಟ್ಟು 2.73 ಲಕ್ಷ ರೂ, ನಷ್ಟ ಉಂಟಾಗಿದೆ

ಎರಡು ದಿನಗಳಿಂದ ಕಾಪು ತಾಲ್ಲೂಕಿನ ಪಡುಬಿದ್ರಿ, ಶಿರ್ವ, ಕಾಪು ಪರಿಸರಿದಲ್ಲಿ ಭಾರೀ ಮಳೆಯಾಗುತಿದೆ. ಮಂಗಳವಾರ ಮುಂಜಾನೆ ಭಾರೀ ಗಾಳಿ ಬೀಸಿದ್ದು, ಹಲವಡೆ ಮರಗಳು ಉರಳಿಬಿದ್ದಿದೆ. ನಡ್ಸಾಲು ಗ್ರಾಮದ ಸಾವಿತ್ರಿ ಇವರ ಮನೆ ಗಾಳಿ, ಮಳೆಗೆ ಹಾನಿಯಾಗಿದ್ದು, 2.15ಲಕ್ಷ ರೂ. ನಷ್ಟ ಉಂಟಾಗಿದೆ. ಮಜೂರು ಗ್ರಾಮದ ಕಾಸಿಂ ಸಾಹೇಬ್ ಇವರ ಮನೆಗೆ ಭಾಗಶಃ ಹಾನಿಯಾಗಿದ್ದು, ಸುಮಾರು 30ಸಾವಿರ ನಷ್ಟ ಉಂಟಾಗಿದೆ. ಮಲ್ಲಾರು ಗ್ರಾಮದ ಅಖ್ತರ್ ಆದಿಲ್ ಇವರ ಮನೆಗೆ ಭಾಗಶಃ ಹಾನಿಯಾಗಿದ್ದು, 28 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರ ಉಳಿಯಾರಗೋಳಿ ದಂಡತಿರ್ಥ ಶಾಲೆ ಬಳಿ ಬೃಹತ್ ಗಾತ್ರದ ನಂದಿ ಮರ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಉರಳಿಬಿದ್ದಿದೆ. ಇದರಿಂದ ಮೂರು ವಿದ್ಯುತ್ ಕಂಬಗಳು ತುಂಡಾಗಿವೆ. ಇದರಿಂದ ಮೆಸ್ಕಾಂ ಇಲಾಖೆಗೆ ಐವತ್ತು ಸಾವಿರ ರೂಪಾಯಿಗಳು ಅಧಿಕ ಮೊತ್ತದ ಸೊತ್ತು ನಷ್ಟ ಅಂದಾಜಿಸಲಾಗಿದೆ. ಘಟನೆಯಿಂದಾಗಿ ಹೆದ್ದಾರಿ ಸಂಚಾರ ವೃತ್ಯಯಗೊಂಡಿದ್ದು, ಬ್ಯಾರಿಕೇಡ್‍ಗಳನ್ನು ಇರಿಸಿ, ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.

ಎರಡು ದಿನಗಳ ಅಂತರದಲ್ಲಿ ಉಳಿಯಾರಗೋಳಿ, ಕರಂದಾಡಿ, ಪಕೀರಣಕಟ್ಟೆ ವ್ಯಾಪ್ತಿಯಲ್ಲಿ ಐದು ಕಂಬಗಳು ಉರುಳಿ ಬಿದ್ದಿದ್ದು ಮೆಸ್ಕಾಂಗೆ 1 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಸೊತ್ತು ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

ಪಡುಬಿದ್ರಿ-ಅವರಾಲು ಮಟ್ಟು ರಸ್ತೆಯ ಅಂಗನವಾಡಿ ಬಳಿಯ ಮಾವಿನ ಮರವೊಂದು ಬುಡ ಸಮೇತ ಉರುಳಿದ್ದು, ಇದರಿಂದ ಈ ರಸ್ತೆಯಲ್ಲಿ ಸಂಚಾ ರಕ್ಕೆ ವ್ಯತ್ಯಯ ಉಂಟಾಯಿತು. ಇದರಿಂದ ಹಲವು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಒಂದು ಕಂಬ ವ್ಯವಸಾಯ ಸಹಕಾರಿ ಬ್ಯಾಂಕ್ ಕಚೇರಿಯ ನಾಮಫಲಕಕ್ಕೆ ಬಿದ್ದು, ಹಾನಿಯಾಗಿದೆ. ಬೆಳಗಿನ ಜಾವ ಬೀಸಿದ ಭಾರೀ ಗಾಳಿಗೆ ಈ ಮರ ಉರುಳಿದ್ದು, ಮಧ್ಯಾಹ್ನದ ವೇಳೆಗೆ ಮರ ತೆರವುಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.

ಪಡುಬಿದ್ರಿ-ಕಾರ್ಕಳ ರಸ್ತೆಯಲ್ಲಿ ಸುಮಗ ಸಂಚಾರಕ್ಕೆ ಇರಿಸಲಾದ ಪೊಲೀಸ್ ಚೌಕಿ ಗಾಳಿಗೆ ಉರುಳಿ ಬಿದ್ದಿದ್ದು, ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ರಿಕ್ಷಾ ಚಾಲಕರ ಸಹಾಯದಿಂದ ಸರಿಪಡಿಸಲಾಯಿತು. ಹಲವು ಅಂಗಡಿಗಳ ನಾಮಫಲಕಗಳು ಗಾಳಿಗೆ ಹಾರಿಹೋಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News