ಆರೋಗ್ಯ ಜಾಗೃತಿ, ಮತದಾನ ಜಾಗೃತಿ ಅಭಿಯಾನ: ದ.ಕ ಜಿಲ್ಲೆಯ ವಿದ್ಯಾರ್ಥಿನಿಗೆ ಗೃಹ ಸಚಿವರಿಂದ ಅಭಿನಂದನೆ
Update: 2024-11-25 16:33 GMT
ಮಂಗಳೂರು: ಆರೋಗ್ಯ ಜಾಗೃತಿ ಹಾಗೂ ಮತದಾನ ಜಾಗೃತಿ ಅಭಿಯಾನ ನಡೆಸಿದ ವಿದ್ಯಾರ್ಥಿನಿ ಸನ್ನಿಧಿ ಕಶೆಕೋಡಿ ಅವರನ್ನು ರಾಜ್ಯದ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ತುಮಕೂರು ನಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ಕ್ರೀಡಾ ಕೂಟದ ಸಂದರ್ಭದಲ್ಲಿ ತುಮಕೂರಿನಲ್ಲಿ ಅಭಿನಂಧಿಸಿ ಸನ್ಮಾನಿಸಿದರು.
ಸನ್ನಿಧಿ ಕಶೆಕೋಡಿ ಮಾಣಿ ಬಾಲವಿಕಾಸ ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿ. ಲೋಕೇಶ್ ಹಾಗೂ ಶೀಲಾವತಿ ಇವರ ಪುತ್ರಿ. ವಿದ್ಯಾರ್ಥಿನಿ ಸನ್ನಿಧಿ ಕಶೆಕೋಡಿ ಈಗಾಗಲೇ 5 ರಾಜ್ಯಗಳಲ್ಲಿ ಚುನಾವಣಾ ಜಾಗೃತಿ ಮೂಡಿಸಿ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಆರೋಗ್ಯ ದ ಬಗ್ಗೆ ಸಾರ್ವಜನಿಕ ರಲ್ಲಿ ಜಾಗೃತಿ ಮೂಡಿಸುವ ಅಭಿಯಾನದ ಸಚಿವರು ತಿಳಿದು ಕೊಂಡ ಸಚಿವರು ಶುಭ ಹಾರೈಸಿ ಅಭಿನಂಧಿಸಿದರು.