ಕೊಣಾಜೆ: ಬೆಂಕಿ ಆಕಸ್ಮಿಕ; ಕೆತ್ತನೆ ಮಾಡಿ ಇಡಲಾಗಿದ್ದ ಲಕ್ಷಾಂತರ ರೂ ಮೌಲ್ಯದ ಮರದ ಪೀಠೋಪಕರಣಗಳು ಭಸ್ಮ

Update: 2024-02-05 10:14 GMT
ಕೊಣಾಜೆ :  ಮರದ ಮಿಲ್  ಬಳಿ  ಬೆಂಕಿ ತಗುಲಿದ ಪರಿಣಾಮ ಕೆತ್ತನೆ ಮಾಡಿ ಇಡಲಾಗಿದ್ದ  ಬಾಗಿಲು, ಕಿಟಕಿಗಳು ಸೇರಿದಂತೆ ಸುಮಾರು ಇಪ್ಪತ್ತು ಲಕ್ಷ ರೂ ಮೌಲ್ಯದ ಮರದ‌ ಪೀಠೋಪಕರಣಗಳು  ಸುಟ್ಟು ಭಸ್ಮಗೊಂಡಿರುವ ಘಟನೆ ಕೈರಂಗಳ‌ ಗ್ರಾಮದ‌ ನಡುಪದವು ಪಿ.ಎ.ಕಾಲೇಜು ಬಳಿ ಬಳಿ ಭಾನುವಾರ ನಡೆದಿದೆ. 
ನಡುಪದವು  ರಾಮಚಂದ್ರ ಪದ್ಮಶಾಲಿ ಎಂಬವರಿಗೆ ಸೇರಿದ ಮರದ ಮಿಲ್ ಬಳಿ ಮಧ್ಯಾಹ್ನ ಈ ಬೆಂಕಿ ಅನಾಹುತ ಸಂಭವಿಸಿದೆ.‌ ಮಿಲ್ ಸಮೀಪದ ಹುಲ್ಲು ಪೊದೆಗಳಿಗೆ‌ ಬೆಂಕಿ ತಗುಲಿದ್ದು ಬಳಿಕ ಹೊರಗೆ ಕೆತ್ತನೆ ಮಾಡಿ ಇಡಲಾಗಿದ್ದ ಮನೆಗಳ, ದೈವಸ್ಥಾನಗಳ ಕಿಟಕಿ,‌ಬಾಗಿಲುಗಳಿಗೆ ಸಂಬಂಧಿಸಿದ ಮರಗಳು, ಹಾಗೂ ಪೀಠೋಪಕರಣಗಳ ಮರಗಳು ನಾಶವಾಗಿವೆ. ಅಲ್ಲದೆ ಯಂತ್ರಗಳಿಗೂ ಹಾನಿಯಾಗಿದೆ.
 ಆರಂಭದಲ್ಲಿ ಬೆಂಕಿ ಹಿಡಿದಿದ್ದು ಯಾರಿಗೂ ಅರಿವಾಗಿರಲಿಲ್ಲ. ಬಳಿಕ ಸ್ಥಳೀಯ ಯುವಕರು ನೀರು ಹಾಯಿಸಿ ಬೆಂಕಿ ನಂದಿಸಿದ್ದು, ಅಷ್ಟು‌ಹೊತ್ತಿಗಾಗಲೇ ಮರದ‌ಸೊತ್ತುಗಳು ನಾಶವಾಗಿತ್ತು ಎಂದು ತಿಳಿದು ಬಂದಿದೆ.
ಯಾರೋ ಸಿಗರೇಟು ಎಳೆದು ಬಿಸಾಡಿದ ಪರಿಣಾಮ ಹುಲ್ಲುಪೊದೆಗಳಿಗೆ ಬೆಂಕಿ ಹಿಡಿದು ಕೆತ್ತನೆ ಮಾಡಿ‌ ಇಡಲಾಗಿದ್ದ ಮರಗಳಿಗೆ ವ್ಯಾಪಿಸಿರಬಹುದು ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಕೊಣಾಜೆ ಪೊಲೀಸರು ಆಗಮಿಸಿ ಪರಿಶೀಲನೆ‌ ನಡೆಸಿದ್ದಾರೆ.
Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News