ಮಂಗಳೂರು: ಡ್ರಗ್ಸ್ ಸಹಿತ ಆರೋಪಿ ಸೆರೆ

Update: 2024-09-06 17:35 GMT

ಮಂಗಳೂರು, ಸೆ.6: ನಿಷೇಧಿತ ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಅಶೋಕ ನಗರದ ಹಿಮಾನಿಷ್ (27) ಎಂಬಾತನನ್ನು ಬಂಧಿಸಿರುವ ಕಂಕನಾಡಿ ನಗರ ಪೊಲೀಸರು ಕಾರು, ಡ್ರಗ್ಸ್ ಸಹಿತ 7.13 ಲ.ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸೆ.3ರಂದು ಪೊಲೀಸರು ಪಡೀಲ್ ಜಂಕ್ಷನ್ ಬಳಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಅನುಮಾನಗೊಂಡ ಕಾರನ್ನು ನಿಲ್ಲಿಸಿ ಅದರ ಚಾಲಕನನ್ನು ವಿಚಾರಿಸಿದಾಗ ಆತ ಕೇರಳ ಕಡೆಯಿಂದ ಬಂದಿದ್ದು ಡ್ರಗ್ಸ್ ಸೇವಿಸಿರುವುದಾಗಿ ತಿಳಿಸಿದ ಮೇರೆಗೆ ಕಾರನ್ನು ತಪಾಸಣೆಗೊಳಪಡಿಸಲಾಯಿತು. ಆವಾಗ ಕಾರಿನಲ್ಲಿ 2.60 ಗ್ರಾಂ ತೂಕದ ಮಾದಕ ವಸ್ತುಗಳನ್ನು ಒಳಗೊಂಡಿ ರುವ ಪ್ಲಾಸ್ಟಿಕ್ ಕವರ್‌ಗಳು ಪತ್ತೆಯಾಗಿವೆ. ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ಡ್ರಗ್ಸ್, ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News