ಮಂಗಳೂರು: ಎಐಟಿಯುಸಿ ಪ್ರತಿಭಟನೆ

Update: 2023-08-01 12:50 GMT

ಮಂಗಳೂರು, ಆ.1: ರಾಜ್ಯ ಹೈಕೋರ್ಟ್ ತೀರ್ಪು ನೀಡಿದ್ದರೂ ಕೂಡ 12.75 ರೂ. ತುಟ್ಟಿಭತ್ತೆ ಪಾವತಿಸದ ಮತ್ತು ಕನಿಷ್ಟ ಕೂಲಿ 210 ರೂ.ವನ್ನು ಜಾರಿಗೊಳಿಸದ ಬೀಡಿ ಮಾಲಕರ ನೀತಿಯ ವಿರುದ್ಧ ನಗರದ ಮಿನಿ ವಿಧಾನಸೌಧದ ಮುಂದೆ ಮಂಗಳವಾರ ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಐಟಿಯುಸಿ ನೇತೃತ್ವದ ಎಸ್.ಕೆ. ಬೀಡಿ ವರ್ಕರ್ಸ್‌ ಫೆಡರೇಶನ್‌ನ ಅಧ್ಯಕ್ಷ ಹಾಗೂ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ.ಎಸ್. ಬೇರಿಂಜ ‘ತನ್ನ ವಾಸ್ತವ್ಯದ ಮನೆಯನ್ನೇ ಬೀಡಿ ಕಾರ್ಖಾನೆಯಾಗಿ ಬಳಸಿ, ಸಮಯದ ಮಿತಿಯಿಲ್ಲದೆ ಹಗಲಿರುಳೆನ್ನದೆ ದುಡಿದು, ತಂಬಾಕಿನ ಧೂಳು ಆರೋಗ್ಯಕ್ಕೆ ಹಾನಿಕರವೆಂದು ತಿಳಿದೂ ತನ್ನನ್ನೇ ಅವಲಂಬಿಸಿರುವ ತನ್ನ ಕುಟುಂಬವನ್ನು ಪೋಷಿಸಲಾಗದ ಬೀಡಿ ಕಾರ್ಮಿ ಕರ ಮೇಲೆ ಮಾಲಕರಿಗೆ ಯಾಕೆ ಕರುಣೆ ಇಲ್ಲ. ಅವರ ಹಕ್ಕಿನ ಮಜೂರಿಯನ್ನು ಯಾಕೆ ವಂಚಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಸಿಪಿಐ ದ.ಕ.ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್, ಫೆಡರೇಶನ್‌ನ ಉಪಾಧ್ಯಕ್ಷರಾದ ಉಮಾವತಿ ಕುರ್ನಾಡು, ಹಸೈನಾರ್ ವಿಟ್ಲ ಮಾತನಾಡಿದರು.

ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ವಿ.ರಾವ್, ಕೋಶಾಧಿಕಾರಿ ಎ. ಪ್ರಭಾಕರ್ ರಾವ್, ಸಿಪಿಐ ಮಾಜಿ ಕಾರ್ಯದರ್ಶಿ ವಿ. ಕುಕ್ಯಾನ್, ಎಐಟಿಯುಸಿ ನಾಯಕ ರಾದ ಸುಲೋಚನಾ ಕವತ್ತಾರು, ತಿಮ್ಮಪ್ಪಕಾವೂರು, ಬಾಬು ಭಂಡಾರಿ, ರಾಮ ಮುಗೇರ, ಸೀತಾರಾಮ ವಿಟ್ಲ, ಒ.ಕೃಷ್ಣ, ಶಮಿತಾ, ಮಮತಾ, ಶಿವಾನಂದ ಉಡುಪಿ, ಶಶಿಕಲಾ ಗಿರೀಶ್, ಸುಚಿತ್ರಾ, ಸರೋಜಿನಿ ಕುರಿಯಾಳ, ಕೇಶವತಿ, ಮೋಹನ ಅರಳ, ಹರ್ಷಿತ್ ಮತ್ತಿತರರು ಪಾಲ್ಗೊಂಡಿದ್ದರು.

ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿದರು. ಫೆಡರೇಶನ್‌ನ ಜೊತೆ ಕಾರ್ಯದರ್ಶಿ ಕರುಣಾಕರ್ ಮಾರಿಪಲ್ಲ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News