ಮಂಗಳೂರು: ಆನ್‌ಲೈನ್ ವಂಚನೆ ಆರೋಪ; ಪ್ರಕರಣ ದಾಖಲು

Update: 2023-08-29 16:50 GMT

ಮಂಗಳೂರು, ಆ.29: ಮೊಬೈಲ್‌ಗೆ ಬಂದ ಮೆಸೇಜ್‌ನ ಲಿಂಕ್ ಒತ್ತಿದ ವ್ಯಕ್ತಿಯ ಖಾತೆಯಿಂದ 6,21,082ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ.27ರಂದು ತನ್ನ ಮೊಬೈಲ್‌ಗೆ ಬ್ಯಾಕೊಂದರ ಹೆಸರಿನಲ್ಲಿ ಸಂದೇಶ ಬಂದಿದ್ದು, ಅದರಲ್ಲಿರುವ ಲಿಂಕ್ ಒತ್ತಿ ಮಾಹಿತಿಯನ್ನು ತುಂಬಿಸಿದ್ದೆ. ಆ ಬಳಿಕ ಅಪರಿಚಿತ ವ್ಯಕ್ತಿ ಕರೆ ಮಾಡಿ ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿ ತನ್ನ ಪಾನ್ ಕಾರ್ಡ್ ಅಪ್ ಡೇಟ್ ಮಾಡುವಂತೆ ಮಾಹಿತಿ ಕೇಳಿದ. ಅದರಂತೆ ತಾನು ಆತ ಕೇಳಿದ ಮಾಹಿತಿ ಜೊತೆಗೆ ಒಟಿಪಿಯನ್ನು ಶೇರ್ ಮಾಡಿದ್ದೆ. ಆ ಬಳಿಕ ತನ್ನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 6,21,082 ರೂ.ವನ್ನು ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ಹಣ ಕಳಕೊಂಡ ವ್ಯಕ್ತಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News