ಮಂಗಳೂರು: ಕರ್ನಾಟಕ ಭಾವೈಕ್ಯತಾ ಪರಿಷತ್ ನಿಂದ ಭಾವೈಕ್ಯ ಸಮ್ಮಿಲನ, ಕವಿಗೋಷ್ಠಿ

Update: 2023-08-01 13:01 GMT

ಮಂಗಳೂರು: ಸಾಹಿತ್ಯಕ್ಕೆ ಜನರನ್ನು ಒಗ್ಗೂಡಿಸುವ ಅದ್ಭುತ ಶಕ್ತಿಯಿದ್ದು, ಕವಿಗಳು, ಲೇಖಕರು, ಸಾಹಿತಿಗಳು ನಾಡನ್ನು ಕಟ್ಟಲು ಪರಸ್ಪರ ಒಂದಾಗ ಬೇಕಾದ ಅನಿವಾರ್ಯತೆಯಿದೆ ಎಂದು ಕರ್ನಾಟಕ ಭಾವೈಕ್ಯತಾ ಪರಿಷತ್ ಅಧ್ಯಕ್ಷ ಕೆ.ಎಂ.ಇಕ್ಬಾಲ್ ಬಾಳಿಲ ಹೇಳಿದ್ದಾರೆ.

ಕರ್ನಾಟಕ ಭಾವೈಕ್ಯತಾ ಪರಿಷತ್ ವತಿಯಿಂದ ನಗರದ ಜೆಪ್ಪುಮರಿಯಾ ಸಭಾಂಗಣದಲ್ಲಿ ನಡೆದ ಭಾವೈಕ್ಯ ಸಮ್ಮಿಲನ ಮತ್ತು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಭಾವೈಕ್ಯತಾ ಪರಿಷತ್ ಪ್ರಧಾನ ಕಾರ್ಯದರ್ಶಿ ಎಚ್.ಭೀಮರಾವ್ ವಾಷ್ಠರ್ ಕೋಡಿಹಾಳ ಸಮಾರಂಭವನ್ನು ಉದ್ಘಾಟಿಸಿದರು. ಸಂಚಾಲಕ ಕೆ.ಎ. ಅಬ್ದುಲ್ ಅಝೀಝ್ ಪುಣಚ ಸಂದೇಶ ಭಾಷಣ ಮಾಡಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಾದ ಡಾ.ಮಾಕ್ಸಿಂ ಡಿಸೋಜ, ಮುಹಮ್ಮದ್ ಹಾಜಿ ಪರಪ್ಪು, ಇಕ್ಬಾಲ್ ಕೋಲ್ಪೆ, ಕೆ.ಎಸ್.ರಾಝಿಕ್ ವಿಟ್ಲ, ಲತೀಫ್ ಗುರುಪುರ ಮೊದಲಾದವರನ್ನು ಸನ್ಮಾನಿಸಲಾಯಿತು.

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ 75 ಕವಿಗಳು ಕವನ ವಾಚನ ಮಾಡಿದರು. ಭಾಗವಹಿಸಿದ ಕವಿಗಳಿಗೆ ‘ಭಾವೈಕ್ಯತಾ ಕಾವ್ಯಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎ.ಬಿ.ಮೊಹಿದೀನ್ ಕಳಂಜ, ಡಾ.ಸಿದ್ದೀಕ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಭಾವೈಕ್ಯತಾ ಪರಿಷತ್ ಉಪಾಧ್ಯಕ್ಷ ಎ.ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿದರು. ರಶೀದ್ ಬೆಳ್ಳಾರೆ ಮತ್ತು ನಾಸಿರ್ ಪೆರ್ಲಂಪಾಡಿ ಸಹಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News