ಮಂಗಳೂರು: ಆ.18ರಂದು ಕಮಿಷನರ್ ಕುಲದೀಪ್ ಕುಮಾರ್ ‌ ಜೈನ್ ಜತೆಗೆ ನೇರ ಸಂವಾದ ಕಾರ್ಯಕ್ರಮ

Update: 2023-08-17 12:32 GMT

ಕುಲದೀಪ್ ಕುಮಾರ್ ಜೈನ್

ಮಂಗಳೂರು, ಆ. 17: ಬೆಂಗರೆ ಗ್ರಾಮವನ್ನು ಮಾದಕ ದ್ರವ್ಯಮುಕ್ತ ಮಾಡುವ ಆಶಯದೊಂದಿಗೆ ಬೆಂಗರೆ ನಾಗರಿಕ ಹಿತ ರಕ್ಷಣಾ ಸಮಿತಿ ವತಿಯಿಂದ ಆ.18 ರಂದು ಸಂಜೆ 4:30ಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಅವರ ಜತೆಗೆ ನೇರ ಸಂವಾದ ಕಾರ್ಯಕ್ರಮ ಮುಹಿಯುದ್ದೀನ್ ಜುಮಾ ಮಸೀದಿ ಮುಂಭಾಗದಲ್ಲಿ ನಡೆಯಲಿದೆ.

ಗುರುವಾರ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ ಮದ್ರಸತುಲ್ ದೀನಿಯ್ಯ ಅಸೋಸಿಯೇಷನ್ ಅಧ್ಯಕ್ಷ ಬಿಲಾಲ್ ಮೊಹಿದ್ದೀನ್ ಅವರು, ಬೆಂಗರೆ ಪ್ರದೇಶದಲ್ಲಿಯೂ ಡ್ರಗ್ಸ್ ಲಗ್ಗೆ ಇಟ್ಟಿದೆ. ಕೆಲವು ಸಮಸ್ಯೆ ಗಳು ಎದುರಾಗಿದೆ. ಇದರ ವಿರುದ್ಧ ಹೋರಾಟಕ್ಕೆ ಬೆಂಗರೆ ನಾಗರಿಕ ಹಿತರಕ್ಷಣ ಸಮಿತಿ ನಿರ್ಧರಿಸಿದೆ ಎಂದರು.

ಮಾದಕ ವ್ಯಸನದ ದುಷ್ಪರಿಣಾಮ ಕುರಿತು ಯೆನೆಪೋಯ ಮೆಡಿಕಲ್ ಕಾಲೇಜು, ಸಮುದಾಯ ವೈದ್ಯಕೀಯ ವಿಭಾಗದ ವರಿಂದ ಜನಜಾಗೃತಿ ನಡೆಯಲಿದೆ. ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್ ಜತೆಗೆ ಸಂವಾದ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಪೊರೇಟರ್ ಮುನೀಬ್ ಬೆಂಗರೆ, ಸಮಿತಿ ಉಪಾಧ್ಯಕ್ಷ ಬಿ.ಎ.ಇಬ್ರಾಹೀಂ, ಜತೆ ಕಾರ್ಯದರ್ಶಿ ನದೀಮ್ ಸಾಹೇಬ್, ಮಹಮ್ಮದ್ ಶರೀಫ್ ದಾರಿಮಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News