ಮಂಗಳೂ: ನಕಲಿ ಇಮೇಲ್ ಬಳಸಿ ವಂಚನೆ; ಪ್ರಕರಣ ದಾಖಲು

Update: 2023-08-07 15:35 GMT

ಮಂಗಳೂರು, ಆ.7: ವ್ಯಕ್ತಿಯೊಬ್ಬರಿಗೆ ಅವರ ಪರಿಚಯದ ವ್ಯಕ್ತಿಯ ನಕಲಿ ಇ-ಮೇಲ್ ಐಡಿ ಬಳಸಿಕೊಂಡು ಹಣ ಪಡೆದು ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ತನ್ನ ಇ-ಮೇಲ್ ಐಡಿಗೆ ಪರಿಚಯದ ವ್ಯಕ್ತಿಯೋರ್ವರ ಇ-ಮೇಲ್ ಐಡಿಯಿಂದ ಬಂದ ಸಂದೇಶದಲ್ಲಿ ಮಗಳ ಮದುವೆ ವಾರ್ಷಿಕೋತ್ಸವ ಆಚರಣೆ ಬಗ್ಗೆ ತಿಳಿಸಲಾಗಿತ್ತು. ಅದಕ್ಕೆ ತಾನು ಪ್ರತಿಕ್ರಿಯಿಸಿದ್ದೆ. ಆ ಬಳಿಕ ವಾರ್ಷಿಕೋತ್ಸವದ ಬಗ್ಗೆ ಗಿಫ್ಟ್ ನೀಡಲು ಹಣದ ಅವಶ್ಯಕತೆ ಇದೆ ಎಂಬುದಾಗಿ ಸಂದೇಶ ಬಂದಿತ್ತು. ಇದನ್ನು ನಂಬಿದ ತಾನು ಪರಿಚಯದ ವ್ಯಕ್ತಿಯೇ ಸಂದೇಶ ಕಳುಹಿಸಿರಬಹುದು ಎಂದು ನಂಬಿ ಆ.4ರಂದು ರಾತ್ರಿ 16,970 ರೂ. ಮತ್ತು 27,000 ರೂ. ಕಳುಹಿಸಿದ್ದೆ. ಆ ಬಳಿಕವೂ ಅದೇ ಇ- ಮೇಲ್ ಐಡಿಯಿಂದ ಇನ್ನಷ್ಟು ಹಣದ ಅವಶ್ಯಕತೆ ಇದೆ ಎಂಬ ಸಂದೇಶ ಬಂದಿತ್ತು. ತಾನು ಮತ್ತೆ 72,000 ರೂ.ಗಳನ್ನು ಕಳುಹಿಸಿದೆ. ಅನಂತರ ಮತ್ತಷ್ಟು ಹಣದ ಅಗತ್ಯವಿರುವುದಾಗಿ ಸಂದೇಶ ಬಂತು. ಈ ಬಗ್ಗೆ ಸಂದೇಹ ಉಂಟಾಗಿ ತಾನು ಪರಿಚಯದ ವ್ಯಕ್ತಿಯನ್ನು ಖುದ್ದಾಗಿ ಭೇಟಿ ಮಾಡಿ ವಿಚಾರಿಸಿದೆ. ಆವಾಗ ಯಾರೋ ಪರಿಚಯದ ವ್ಯಕ್ತಿಯ ಇ-ಮೇಲ್ ಐಡಿಯನ್ನು ನಕಲಿ ಮಾಡಿ ಸಂದೇಶ ಕಳುಹಿಸಿ 1,15,970 ರೂ. ವರ್ಗಾಯಿಸಿಕೊಂಡು ಮೋಸ ಮಾಡಿರುವುದು ಗೊತ್ತಾಗಿದೆ ಎಂಬುದಾಗಿ ದೂರುದಾರರು ಸೆನ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News