ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಶೇ 12.5ರಷ್ಟು ಹೆಚ್ಚಳ

Update: 2024-04-08 10:14 GMT

ಮಂಗಳೂರು, ಎ.8: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2023-2024ನೇ ಸಾಲಿನ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.12.5ರಷ್ಟು ಹೆಚ್ಚಳ ದಾಖಲಿಸಿದೆ.

2023-24ರ ಹಣಕಾಸು ವರ್ಷದಲ್ಲಿ ವಿಮಾನ ನಿಲ್ದಾಣವು 20,18,796 ಪ್ರಯಾಣಿಕರನ್ನು ನಿರ್ವಹಿಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ 17,94,054 ಪ್ರಯಾಣಿಕರನ್ನು ನಿರ್ವಹಿಸಿತ್ತು. ಇದು ಶೇ 12.5ರಷ್ಟು ಬೆಳವಣಿಗೆಯಾಗಿದೆ.

ದೇಶೀಯ ಪ್ರಯಾಣಿಕರ ಸಂಖ್ಯೆ 14,08,300 ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ 6,10,496 ಆಗಿದೆ. ದೇಶೀಯ ಪ್ರಯಾಣಿಕರು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2023-24ರ ಹಣಕಾಸು ವರ್ಷದಲ್ಲಿ ಶೇ 16.5 ಹೆಚ್ಚಾಗಿದೆ. ಅಂತೆಯೇ, 2023-24ರ ಹಣಕಾಸು ವರ್ಷದಲ್ಲಿ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಿದ ಅಂತಾರಾಷ್ಟ್ರೀಯ ಪ್ರಯಾಣಿಕರು ಸಹ ಹಿಂದಿನ ಹಣಕಾಸು ವರ್ಷದಲ್ಲಿ ದಾಖಲಾದ ಶೇ 4.2 ಕ್ಕಿಂತ ಹೆಚ್ಚಾಗಿದೆ.

2023-24ರ ಹಣಕಾಸು ವರ್ಷದಲ್ಲಿ 15,113 ಎಟಿಎಂಗಳು ಹಿಂದಿನ ಹಣಕಾಸು ವರ್ಷದಲ್ಲಿ ನಿರ್ವಹಿಸಿದ 14,475 ಎಟಿಎಂಗಳಿಗಿಂತ ಶೇ 4.4 ಜಾಸ್ತಿಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಸಾಮಾನ್ಯ ವಾಯುಯಾನ (ಚಾರ್ಟರ್ಡ್ ವಿಮಾನಗಳು) ಶೇ 37.7ರಷ್ಟು ಪ್ರಗತಿಯಾಗಿದೆ. ಈ ಅವಧಿಯಲ್ಲಿ ವಿಮಾನ ನಿಲ್ದಾಣವು 365 ವಿಮಾನಗಳನ್ನು ನಿರ್ವಹಿಸಿದೆ, ಇದು 2022-23ರ ಹಣಕಾಸು ವರ್ಷದಲ್ಲಿ ವಿಮಾನ ನಿಲ್ದಾಣ ನಿರ್ವಹಿಸಿದ್ದಕ್ಕಿಂತ 100 ಹೆಚ್ಚಾಗಿದೆ. ವಿಮಾನ ನಿಲ್ದಾಣಕ್ಕೆ ಕಾರ್ಯನಿರ್ವಹಿಸುವ ವಿಮಾನಯಾನ ಸಂಸ್ಥೆ ಎದುರಿಸಿದ ಅನೇಕ ಸವಾಲುಗಳ ಹೊರತಾಗಿಯೂ ದೇಶೀಯ ಎಟಿಎಂಗಳ ಹೆಚ್ಚಳವು ಶೇ 11.7 ಆಗಿದೆ. ಸಾಗರೋತ್ತರ ಎಟಿಎಂಗಳಲ್ಲಿ ಕುಸಿತದ ಹೊರತಾಗಿಯೂ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿದೆ.

ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣದ ಪ್ರಮುಖ ಅಂಶವೆಂದರೆ ಡಿಸೆಂಬರ್ 2023 ರಲ್ಲಿ ವಿಮಾನ ನಿಲ್ದಾಣವು ದಾಖಲೆಯ 2.03 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಾರ್ಚ್ 2024 ರಲ್ಲಿ ದಾಖಲೆಯ 1550 ಎಟಿಎಂಗಳನ್ನು ನಿರ್ವಹಿಸಿದೆ. ಬೆಂಗಳೂರು-ಮಂಗಳೂರು ವಲಯದಲ್ಲಿ ಏರ್ ಬಸ್ ಬದಲಿಗೆ ಹೆಚ್ಚಿನ ಎಟಿಆರ್ ಗಳನ್ನು ಬಳಸಲು ವಿಮಾನಯಾನ ಸಂಸ್ಥೆ ಕೈಗೊಂಡ ಕ್ರಮವು ಇದಕ್ಕೆ ಮುಖ್ಯ ಕಾರಣವಾಗಿದೆ.

ಚೆನ್ನೈ - ಮಂಗಳೂರು ಬೋಯಿಂಗ್ 737 ಮ್ಯಾಕ್ಸ್ ಸಂಪರ್ಕ : ಏರ್ ಇಂಡಿಯಾ ಎಕ್ಸ್ಪ್ರೆಸ್ ಮಾರ್ಚ್ 31ರಂದು ಪ್ರಾರಂಭವಾದ ಬೇಸಿಗೆ ವೇಳಾಪಟ್ಟಿಯಲ್ಲಿ ಚೆನ್ನೈ - ಮಂಗಳೂರು ನಡುವೆ ಬೆಂಗಳೂರು ಮೂಲಕ ಸಂಪರ್ಕ ಸಾಧಿಸುವ ವಿಮಾನ (ಬೋಯಿಂಗ್ 737 ಮ್ಯಾಕ್ಸ್) ಏಕಮುಖ ಸಂಚಾರ ಸೌಲಭ್ಯವನ್ನು ಒದಗಿಸಿದೆ. ಐಎಕ್ಸ್ 782ಚೆನ್ನೈನಿಂದ ಬೆಳಗ್ಗೆ 9:45ಕ್ಕೆ ಹೊರಟು ಬೆಳಗ್ಗೆ 10:40ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಬೆಳಗ್ಗೆ 11:15ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 12:15ಕ್ಕೆ ಮಂಗಳೂರು ತಲುಪಲಿದೆ. ಬೇಸಿಗೆಯಲ್ಲಿ ದಿನನಿತ್ಯ ಚೆನ್ನೈಗೆ ಇಂಡಿಗೊ ಸಂಸ್ಥೆಯ ಎರಡು ವಿಮಾನಗಳ ನೇರ ಹಾರಾಟ ಸೌಲಭ್ಯ ಇರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News