ಬಿ ಸಿ ರೋಡ್: ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಕ್ಯಾಂಡಲ್ ಮಾರ್ಚ್
ಮಂಗಳೂರು: ಮಹಿಳಾ ಸುರಕ್ಷತೆಯು ಒಂದು ಸವಾಲಾಗಿ ಪರಿಣಮಿಸಿರುವ ಪ್ರಸ್ತುತ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಸಮಿತಿಯು ಅಕ್ಟೋಬರ್ 2 ರಿಂದ ಡಿಸೆಂಬರ್ 2 ವರೆಗೆ ಮಹಿಳಾ ಸುರಕ್ಷತೆ ಸಾಮೂಹಿಕ ಜವಾಬ್ದಾರಿ ಎಂಬ ರಾಷ್ಟ್ರೀಯ ಅಭಿಯಾನವನ್ನು ರಾಷ್ಟ್ರದಾದ್ಯಂತ ಹಮ್ಮಿಕೊಂಡಿದೆ.
ಈ ಅಭಿಯಾನದ ಮೊದಲ ಹಂತದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ತರಗತಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರಗಳ ವಿತರಣೆ, ಬಿತ್ತಿ ಪತ್ರಗಳನ್ನು ಅಂಟಿಸುವ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು, ಇದೀಗ ಅಭಿಯಾನದ ಎರಡನೇ ಹಂತದ ಭಾಗವಾಗಿ ಕ್ಯಾಂಡಲ್ ಮಾರ್ಚ್ ಪ್ರತಿಭಟನೆಯನ್ನು ಇಂದು ದೇಶಾದ್ಯಂತ ಆಯೋಜಿಸಲಾಗಿದ್ದು , ಇದರ ಭಾಗವಾಗಿ ವಿಮೆನ್ ಇಂಡಿಯಾ ಮೂವ್ಮೆಂಟ್ ಬಂಟ್ವಾಳ ತಾಲೂಕು ಸಮಿತಿಯು ಬಿ.ಸಿ.ರೋಡ್ ಕೈಕಂಬದಲ್ಲಿ cande March ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಸಮಿತಿಯ ಸದಸ್ಯೆ ಶಾಹಿದಾ ತಸ್ನೀಂ ಮಾತನಾಡಿ, ದೇಶದಲ್ಲಿ ಮಹಿಳಾ ಸಾಮಾಜಿಕ ಕಾರ್ಯಕರ್ತೆಯರಿಂದ ಹಿಡಿದು ಸಾಮಾನ್ಯ ಹೆಣ್ಣಿನ ಮೇಲೆ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಮತ್ತೋರ್ವ ಅತಿಥಿ ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷೆ ನೌರಿನ್ ಆಲಂಪಾಡಿ ಮಾತನಾಡಿ ಶೋಚನೀಯವಾಗಿರುವ ಹೆಣ್ಣಿನ ಸ್ಥಿತಿಗತಿಗಳನ್ನೂ, ಅದರ ವಿರುದ್ಧ ಪ್ರತಿಭಟಿಸಬೇಕಾದ ಅನಿವಾರ್ಯತೆ, ಅಗತ್ಯತೆಗಳ ಕುರಿತು ಜಾಗೃತಿ ಮೂಡಿಸಿದರು.
ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾ ಉಪಾಧ್ಯಕ್ಷೆ ಝಹನಾ ಪಾಣೆಮಂಗಳೂರು, ಸದಸ್ಯೆ ಶಿನೀರ ಝೀನತ್ ಗೂಡಿನಬಳಿ ಉಪಸ್ಥಿತರಿದ್ದರು.
ವಿಮೆನ್ ಇಂಡಿಯಾ ಮೂವ್ಮೆಂಟ್ ಬಂಟ್ವಾಳ ಅಸೆಂಬ್ಲಿ ಅಧ್ಯಕ್ಷೆ ಫಾತಿಮಾ ನುಸೈಬಾ ಸ್ವಾಗತ ಕೋರಿ, ಕಾರ್ಯದರ್ಶಿ ಝುಬೈದಾ ಪಾಣೆಮಂಗಳೂರು ಧನ್ಯವಾದವಿತ್ತರು.