ಮೂಡುಬಿದಿರೆ: ಅಲಂಗಾರಿನ ಸಂತ ಥೋಮಸ್ ಶಾಲೆಗೆ ರಾಜ್ಯಪಾಲ ಅಬ್ದುಲ್ ನಝೀರ್ ಭೇಟಿ

Update: 2024-11-19 15:24 GMT

ಮೂಡುಬಿದಿರೆ: ತಾನು ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದ ಅಲಂಗಾರಿನ ಸಂತ ಥೋಮಸ್ ಶಾಲೆಯ ವಿದ್ಯಾರ್ಥಿ ಪ್ರಸ್ತುತ ಅಂಧ್ರ ಪ್ರದೇಶದ ರಾಜ್ಯಪಾಲ ಅಬ್ದುಲ್ ನಝೀರ್ ಅವರು ಮಂಗಳವಾರ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು.

ಸಮಾಲೋಚನೆಯ ವೇಳೆ ಮಕ್ಕಳೊಂದಿಗೆ ಮಾತನಾಡಿದ ಅವರು, ಶಿಕ್ಷಣವು ಮನಸ್ಸಿನ ತರಬೇತಿಯಾಗಿದ್ದು ವಿದ್ಯಾರ್ಥಿ ಗಳು ಭವಿಷ್ಯದ ಸಕಾರಾತ್ಮಕ ಕನಸು ಕಂಡರೆ ಮಾತ್ರ ಉತ್ತುಂಗ ಸ್ಥಾನಕ್ಕೆ ಏರಲು ಸಾಧ್ಯ ಎಂದರು.

ಶಾಲಾ ಸಂಚಾಲಕ ರೇ. ಫಾ. ಮೇಲ್ವಿನ್ ನೋರೋನ್ಹ ಅವರು ಮಾತನಾಡಿ, ಅಬ್ದುಲ್ ನಝೀರ್ ಅವರಿಗೆ ಶುಭಹಾರೈಸಿದರು. ಈ ಸಂದರ್ಭ ಶಾಲಾ ಆಡಳಿತ ಮಂಡಳಿಯ ಸದಸ್ಯ ಪಿ.ಕೆ. ಥೋಮಸ್, ಅಲಂಗಾರು ಹೋಲಿ ರೋಸರಿ ಇಗರ್ಜಿಯ ಉಪಾಧ್ಯಕ್ಷ ಎಡ್ವಾರ್ಡ್ ಸೇರವೊ, ಆಯೋಗ ಮುಖ್ಯಸ್ಥ ರಾಜೇಶ್ ಕಡಲಕೆರೆ, ರಾಜ ಡಿಸೋಜಾ , ಜಾನೆಟ್ ಮಿರಾಂದ, ಶಾಲಾ ಮುಖ್ಯೋಪಾಧ್ಯಾಯಿನಿ ಸಿಲ್ವಿಯ ಡೇಸಾ, ಅಲ್ಫೋನ್ಸ್ ಜೋಸೆಫ್ ಮತ್ತಿತರರು ಉಪಸ್ಥಿತರಿದ್ದರು.






 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News