ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಜನ್ಮ ದಿನಾಚರಣೆ

Update: 2024-11-19 14:36 GMT

ಮಂಗಳೂರು: ಇಂದಿರಾ ಗಾಂಧಿ ಜನಪರ ಹಾಗೂ ರಾಷ್ಟ್ರ ಕೇಂದ್ರಿಕೃತ ನೀತಿಗಳಿಂದ ಜನಪ್ರಿಯವಾಗಿದ್ದರು. ಬ್ಯಾಂಕುಗಳ ರಾಷ್ಟ್ರೀಕರಣ, ಹಸಿರು ಕ್ರಾಂತಿಯ ಮೂಲಕ ದೇಶದ ಆರ್ಥಿಕಾಭಿವೃದ್ಧಿಗೆ ಮುನ್ನುಡಿ ಬರೆದಿದ್ದರು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಜನ್ಮದಿನ ಪ್ರಯುಕ್ತ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಇಂದಿರಾ ಗಾಂಧಿ ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ಜನರ ಪರವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದರು. ಬಡಜನರ ಬಗೆಗಿನ ಕಾಳಜಿ, ಅವರ ಸ್ಥಿತಿಗತಿಗಳ ಸುಧಾರಣೆಗಾಗಿ ಕೈಗೊಂಡ ದಿಟ್ಟ ಕ್ರಮಗಳು ಇಂದಿರಾ ಗಾಂಧಿಯವರನ್ನು ಇಂದಿಗೂ ಜೀವಂತವಾಗಿರಿಸಿದೆ. ಸಾಲ ಮನ್ನಾ ಜಾರಿಗೆ ತಂದು ಜನ ಸಾಮಾನ್ಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಾರಣರಾದರು. ಭೂ ಮಸೂದೆ ಕಾಯ್ದೆಯು ಅತ್ಯಂತ ಪರಿಣಾಮಕಾರಿಯಾಗಿ ದ.ಕ. ಜಿಲ್ಲೆಯಲ್ಲಿ ಜಾರಿಯಾಗಿದೆ. ಬಿಜೆಪಿಗರು ಮತಕ್ಕಾಗಿ ಕೀಳುಮಟ್ಟದ ರಾಜಕೀಯ ಮಾಡಿ ಸಮಾಜವನ್ನು ವಿಭಜಿಸುತ್ತಿದ್ದಾರೆ. ಸುಳ್ಳು ಸುದ್ದಿ ಹರಡುವ ಬಿಜೆಪಿಗರು ನಿಜವಾದ ದೇಶದ್ರೋಹಿಗಳು ಎಂದು ರಮಾನಾಥ ರೈ ಹೇಳಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ, ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಶಶಿಧರ್ ಹೆಗ್ಡೆ, ಸುರೇಶ್ ಬಳ್ಳಾಲ್, ಕೆ.ಹರಿನಾಥ್, ಸ್ಟ್ಯಾನಿ ಆಳ್ವರಿಸ್, ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಶುಭೋದಯ ಆಳ್ವ, ದಿನೇಶ್ ಮೂಳೂರು, ಜೆ. ಅಬ್ದುಲ್ ಸಲೀಂ, ಪ್ರಕಾಶ್ ಸಾಲ್ಯಾನ್, ಕೆ. ಅಶ್ರಫ್, ಪದ್ಮನಾಭ ಅಮೀನ್, ಪದ್ಮನಾಭ ರೈ, ಸಂಶುದ್ದೀನ್ ಕುದ್ರೋಳಿ, ಚಿತ್ತರಂಜನ್ ಶೆಟ್ಟಿ, ಫಾರೂಕ್ ಫರಂಗಿಪೇಟೆ, ವಿಕಾಸ್ ಶೆಟ್ಟಿ, ಪ್ರೇಮ್‌ನಾಥ್, ಗಿರೀಶ್ ಶೆಟ್ಟಿ ಕದ್ರಿ, ಟಿ.ಕೆ.ಸುಧೀರ್, ಸತೀಶ್ ಪೆಂಗಲ್, ಚೇತನ್ ಕುಮಾರ್, ಅಬ್ದುಲ್ ರಹಿಮಾನ್ ಕೋಡಿಜಾಲ್, ಶಬ್ಬೀರ್ ಎಸ್, ಯೋಗೀಶ್ ಕುಮಾರ್, ವಹಾಬ್ ಕುದ್ರೋಳಿ, ಮಕ್ಬೂಲ್ ಕುದ್ರೋಳಿ, ಪ್ರೇಮ್ ಬಳ್ಳಾಲ್‌ಭಾಗ್, ನಿತ್ಯಾನಂದ ಶೆಟ್ಟಿ, ರೂಪಾ ಚೇತನ್, ರಮಾನಂದ ಪೂಜಾರಿ, ಸಮರ್ಥ್‌ಭಟ್, ಜಾರ್ಜ್, ಶಾಂತಲಾ ಗಟ್ಟಿ, ಇಮ್ರಾನ್ ಎ.ಆರ್, ಜಿ.ಎ.ಜಲೀಲ್, ರವೀಂದ್ರ ಪೂಜಾರಿ, ಆಲ್ವಿನ್ ಪ್ರಕಾಶ್, ರಮ್ಲಾನ್ ಮಾರಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News