ಸುರತ್ಕಲ್‌: ಇಂದಿರಾ ಗಾಂಧಿ ಜನ್ಮದಿನಾಚರಣೆ

Update: 2024-11-19 15:20 GMT

ಸುರತ್ಕಲ್‌: ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ, ಭಾರತ ರತ್ನ, ದಿವಂಗತ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಕಾರ್ಯಕ್ರಮವು ಮಂಗಳವಾರ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಸುರತ್ಕಲ್ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಜರುಗಿತು.

ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ಅವರು, ತಮ್ಮ ದಿಟ್ಟ ನಿರ್ಧಾರ, ನಾಯಕತ್ವ ದೊಂದಿಗೆ ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆಯಂತಹ ಐತಿಹಾಸಿಕ ಯೋಜನೆಗಳ ಮೂಲಕ ಬಡವರ, ಶೋಷಿತರ ಬದುಕಿಗೆ ಶಕ್ತಿ ತುಂಬಿದ ಇಂದಿರಾ ಗಾಂಧಿ ಅವರ ಕೊಡುಗೆಗಳು ಸದಾ ಸ್ಮರಣೀಯ ಎಂದರು.

ಮುಂದಿನ ಮಹಾನಗರ ಪಾಲಿಕೆ ಚುನಾವಣೆ ಸಂಬಂಧ ಇಂದಿನಿಂದಲೇ ಎಲ್ಲಾ ತಯಾರಿಗಳನ್ನು ಆರಂಭಿಸಬೇಕು. ಪ್ರತೀ ಬೂತ್‌ ಮಟ್ಟದಲ್ಲಿ ಸಭೆ ನಡೆಸಿ ಅಲ್ಲಿ ಚರ್ಚಿಸಿ ಮನಪಾ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾದ ಒಬ್ಬರನ್ನು ಆಯ್ಕೆ ಮಾಡಿ ಬ್ಲಾಕ್‌ ನಾಯಕರಿಗೆ ತಲುಪಿಸಬೇಕು. ಆ ಬಳಿಕ ನಾಯಕರು ಮನಪಾ ಚುನಾವಣೆಯ ಆಯಾ ಪ್ರದೇಶಗಳ ಅಭ್ಯರ್ಥಿ ಗಳನ್ನು ಎಲ್ಲರೊಂದಿಗೆ ಚರ್ಚಿಸಿ ಅಂತಿಮ ಪಟ್ಟಿ ತಯಾರಿಸಲಿದ್ದಾರೆ. ಆಮೂಲಕ ಮನಪಾ ಚುನಾವಣೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದಲ್ಲಿರುವ 21 ಸ್ಥಾನಗಳಲ್ಲಿ 21 ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲುವಂತೆ ಮಾಡಬೇಕಿದೆ ಎಂದು ನುಡಿದರು.

ಸುರತ್ಕಲ್‌ ಬ್ಲಾಕ್‌ ಕಂಗ್ರೆಸ್‌ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ಇದೇ ಸಂದರ್ಭ ಇಂದಿರಾ ಗಾಂಧಿ ಅವರ ಕುರಿತು ಉಪನ್ಯಾಸ ನೀಡಿದ ಮುದ್ದು ಮೂಡುಬೆಳ್ಳೆ ಅವರನ್ನು ಇನಾಯತ್‌ ಅಲಿ ಅವರು ಅಭಿನಂದಿಸಿದರು. ಈ ಸಂದರ್ಭ ಆನಂದ ಅಮಿನ್, ಬಶೀರ್ ಬೈಕಂಪಾಡಿ, ಶಶಿಕಲಾ ಪದ್ಮನಾಭ, ಗ್ಯಾರಂಟಿ ಯೋಜನೆ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಯೂಸುಫ್ ಮಾಲ್ಲೂರು, ಮನಪಾ ನಾಮನಿರ್ದೇಶಿತ ಮನಪಾ ಸದಸ್ಯ ಕಿಶೋರ್ ಕುಮಾರ್ ಮೊದಲಾದವರಿದ್ದರು. 

ರೆಹಮನ್ ಖಾನ್ ಕುಂಜತ್ತ ಬೈಲ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News